LATEST NEWS
ದೈವಾರಾಧನೆ ಅವಹೇಳನ ಮಾಡಿ ಟ್ವೀಟ್ ಮಾಡಿದ ಆರೋಪಿ ಅರೆಸ್ಟ್

ಮಂಗಳೂರು ಜುಲೈ 08 : ಸಾಮಾಜಿಕ ಜಾಲತಾಣದಲ್ಲಿ ದೈವಾರಾಧನೆ ಬಗ್ಗೆ ನಿಂದನೆ ಮಾಡಿದ ಪೋಸ್ಟ್ ಮಾಡಿದ ಆರೋಪಿಯನ್ನು ನಗರದ ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಂಗಳೂರು ಉತ್ತರದ ಅಮೃತಹಳ್ಳಿಯ ಜಕ್ಕೂರು ಮುಖ್ಯ ರಸ್ತೆ ಬಳಿಯ ನಿವಾಸಿ ಶಿವರಾಜ್ ಎಚ್.ಕೆ. (37) ಎಂದು ಗುರುತಿಸಲಾಗಿದೆ.
ಈತ ತುಳುನಾಡಿನ ದೈವಾರಾಧನೆಯ ಕುರಿತು ನಿಂದನಾತ್ಮಕ ಬರಹಗಳನ್ನು ಹಾಗೂ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಟ್ವೀಟ್ ಮಾಡಿದ್ದ ಬಗ್ಗೆ ತುಳುನಾಡಿನ ದೈವಾರಾಧನೆ ಸಂರಕ್ಷಣಾ ವೇದಿಕೆಯು ದೂರು ನೀಡಿತ್ತು.

ಸೆನ್ ಠಾಣೆಯ ಇನ್‌ಸ್ಪೆಕ್ಟರ್ ಸತೀಶ್ ಎಂ. ನೇತೃತ್ವದ ತಂಡವು ಆರೋಪಿಯನ್ನು ಬಂಧಿಸಿದ್ದು, 7ನೇ ಜೆಎಂಎಫ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ