Connect with us

  DAKSHINA KANNADA

  ಗಡಿಪಾರು ಆದೇಶ: ಇನ್ನು ಮುಂದೆ ಪೊಲೀಸರಿಗೆ ತಿಳಿಸದೆ ದಾಳಿ ನಡೆಸುತ್ತೇವೆ: ಪುನೀತ್ ಅತ್ತಾವರ

  ಮಂಗಳೂರು, ಜುಲೈ 21: ಭಜರಂಗಳದ ಕಾರ್ಯಕರ್ತರ ಮೇಲೆ ಗಡಿಪಾರು ಆದೇಶ ಹಿನ್ನಲೆ, ಮಂಗಳೂರು ಪೊಲೀಸರ ಕ್ರಮದ ಬಗ್ಗೆ ಭಜರಂಗದಳ ಆಕ್ರೋಶ ವ್ಯಕ್ತಪಡಿಸಿದೆ.

  ಈ ಬಗ್ಗೆ ಮಾತನಾಡಿದ ಭಜರಂಗಳ ಮುಖಂಡ ಪುನೀತ್ ಅತ್ತಾವರ, ನಾವು ಇಲ್ಲಿ ತನಕ ಪೊಲೀಸರಿಗೆ ಸೂಚನೆ ನೀಡಿ ನಡೆಯುತ್ತಿದ್ದೆವು, ಇನ್ನು ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡೋದಿಲ್ಲ. ನಾವೇ ನೇರವಾಗಿ ತಡೆಯುತ್ತೇವೆ.

  ಮಾಹಿತಿ ನೀಡಿರೋದಕ್ಕೆ ಗಡೀಪಾರಿನ ನೊಟೀಸ್ ನೀಡಿದ್ದಾರೆ, ಕಣ್ಣೆದುರೇ ಅಕ್ರಮಗಳು ನಡೆದಾಗ ಸುಮ್ಮನೇ ಇರಬೇಕಾ?, ಗೋ ಹತ್ಯೆ ನಿಷೇಧದ ಬಗ್ಗೆ ಸರ್ಕಾರದ ಆದೇಶವೇ ಇದೆ. ಪೊಲೀಸರಿಗೆ ಮಾಹಿತಿ ನೀಡಿಯೇ ಗೋಹತ್ಯೆ ತಡೆದಿದ್ದೇವೆ. ಈಗ ನಮ್ಮ ಮೇಲೆಯೇ ಕೇಸ್ ಹಾಕಿದ್ದಾರೆ.

  ಹೋಳಿ ಆಚರಣೆ ನೆಪದಲ್ಲಿ ಮದ್ಯ,ಡ್ರಗ್ಸ್ ಪಾರ್ಟಿ ಮಾಡುತ್ತಿದ್ದರು, ಅದನ್ನೂ ಪೊಲೀಸರಿಗೆ ಸೂಚನೆ ನೀಡಿಯೇ ತಡೆದಿದ್ದೇವೆ. ಕಾಂಗ್ರೆಸ್ ಸರ್ಕಾರ ತುಷ್ಠೀಕರಣ ನೀತಿ ಮಾಡುತ್ತಿದೆ. ಮೊದಲು ಬಜರಂಗದಳ ನಿಷೇಧದ ಬಗ್ಗೆ ಪ್ರಸ್ತಾಪ ಮಾಡಿದ್ದರು,ಈಗ ಬಜರಂಗಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಭಜರಂಗಳ ಮುಖಂಡ ಪುನೀತ್ ಅತ್ತಾವರ ಹೇಳಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply