Connect with us

    LATEST NEWS

    ಮಂಗಳೂರು ನಗರದಲ್ಲಿ ಡೆಂಗ್ಯೂ, ಮಲೇರಿಯಾ ತಾಂಡವ, ಪಾಲಿಕೆ ಅಧಿಕಾರಿ, ಸದಸ್ಯರ ಸಭೆ ಬಿಸ್ಕಿಟ್ ಚಾಗೆ ಸೀಮಿತ..!!?

    ಮಂಗಳೂರು : ಮಂಗಳೂರು ನಗರದಲ್ಲಿ  ಮಹಾಮಾರಿ ಡೆಂಗ್ಯೂ ಮಲೇರಿಯಾ ತಾಂಡವವಾಡುತ್ತಿದ್ದು ಈಗಾಗಲೇ ನಗರ ಬಹುತೇಕ ಆಸ್ಪತ್ರೆಗಳು ಜ್ವರದ ರೋಗಿಗಳಿಂದ ತುಂಬಿ ತುಳುಕುತ್ತಿವೆ.ಬಿಟ್ಟು ಬಿಟ್ಟು ಬರುತ್ತಿರುವ ಮಳೆ ನಡುವೆಯೇ ಡೆಂಗೆ ಜ್ವರ ಜತೆಗೆ ವೈರಲ್‌ ಜ್ವರಗಳ ಪ್ರಕರಣ ಹೆಚ್ಚುತ್ತಿದೆ. ಏತನ್ಮಧ್ಯೆ ಲ್ಯಾಬ್‌ಗಳಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಳಗೊಂಡಿದೆ.

    ಆನೇಕ ಆಸ್ಪತ್ರೆಗಳಲ್ಲಿ ಬೆಡ್ ಗಳೆ ಖಾಲಿ ಇಲ್ಲದೆ ರೋಗಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಆದ್ರೆ ಸಮರೋಪದಿಯಲ್ಲಿ ಕೆಲಸ ಮಾಡಬೇಕಾದ ಪಾಲಿಕೆ ಸಭೆ ನಡೆಸುವುದರಲ್ಲಿ ಮಗ್ನವಾಗಿದೆ. ಪಾಲಿಕೆ ವ್ಯಾಪ್ತಿಯ ಆನೇಕ ಪ್ರದೇಶಗಳು ಸೊಳ್ಳೆ ಉತ್ಪತ್ತಿ ತಾಣಗಳಾಗಿವೆ. ಸರ್ಕಾರಿ, ಸಹಕಾರಿ  ಕಟ್ಟಡಗಳಲ್ಲಿ ಮಲಿನ ನೀರು ನಿಂತು ಡೆಂಗಿ, ಮಲೇರಿಯಾ ಮಾತ್ರವಲ್ಲ ಇನ್ನೂ ಅನೇಕ ಬರ ಬಾರದ ರೋಗಗಳಿಗೆ ಆಹ್ವಾನ ನೀಡುತ್ತಿದೆ.   ಜಿಲ್ಲಾ ಉಸ್ತುವಾರಿ  ಸಚಿವರು ಆಗೋಮ್ಮೆ ಈಗೊಮ್ಮೆ  ನಗರಕ್ಕೆ ಬಂದು ಸಭೆ ನಡೆಸಿ ಸೂಚನೆ ಕೊಟ್ಟು ಹೋಗ್ತಾರೆ. ಆದ್ರೆ ಪರಿಣಾಮ ಶೂನ್ಯ.

    ಮಂಗಳೂರು ನಗರದ ಹೃದಯಭಾಗದ   ಸಹಕಾರಿ ಸದನ ಬಿಲ್ಡ್ಂಗ್ ರಾವ್ & ರಾವ್ ಸರ್ಕಲ್ ಇದರ ಪಾರ್ಕಿಂಗ್ ಅಡಿಯಲ್ಲಿ ಡ್ರೈನೇಜ್ ನೀರು ಮೇಲೆ ಬಂದು ಪರಿಸರ ಸೊಳ್ಳೆಗಳಿಂದ ತುಂಬಿದ್ದು ಡೆಂಗ್ಯೂ, ಮಲೇರಿಯಾ ಸಹಿತ ಇತರ ಮಾರಕ ರೋಗಗಳಿಗೆ ಆಹ್ವಾನ ನೀಡುತ್ತಿದೆ.

     

     

    ಅಲ್ಲಿನ ಪಕ್ಕದ ಸರ್ವಿಸ್ ಬಸ್ ನಿಲ್ದಾಣ ಸುತ್ತ ಮುತ್ತ ಸುಚಿತ್ವ ಇಲ್ಲದೆ ಕೊಂಪೆಯಾಗಿ ಬಿಟ್ಟಿದೆ.  ಇನ್ನು ಮಂಗಳೂರು ಮಹಾ ನಗರ ಪಾಲಿಕೆ ಸೇರಿದ ನೆನಗುದಿಗೆ ಬಿದ್ದಿರುವ ನಿರ್ಮಾಣ ಹಂತದ ಸುರತ್ಕಲ್ ಮಾರುಕಟ್ಟೆ ಕಟ್ಟಡ ಡೆಂಗಿ ಲಾರ್ವ, ಮಲೇರಿಯಾ ಸಹಿತ ಸಾಂಕ್ರಾಮಿಕ ರೋಗಳನ್ನು ಹರಡುವ ಸೊಳ್ಳೆಗಳನ್ನು ಉತ್ಪಾದಿಸುವ ಕೇಂದ್ರವಾಗಿ ಪರಿವರ್ತನೆಗೊಂಡಿದೆ.  ಸೋಮವಾರ ಭೇಟಿ ನೀಡಿದ ನಾಗರಿಕ ಹೋರಾಟ ಸಮಿತಿ ಸುರತ್ಕಲ್  ನಿಯೋಗ ಅಲ್ಲಿನ ಪರಿಸ್ಥಿತಿ ನೋಡಿ ದಂಗಾಗಿದೆ. ನಿಯೋಗದಲ್ಲಿ ಮುನೀರ್ ಕಾಟಿಪಳ್ಳ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮಾಜಿ ಕಾರ್ಪೊರೇಟರ್ ಗಳಾದ ಪ್ರತಿಭಾ ಕುಳಾಯಿ, ದಯಾನಂದ ಶೆಟ್ಟಿ ಪಂಜಿಮೊಗರು, ಅಯಾಜ್ ಕೃಷ್ಣಾಪುರ, ಹೋರಾಟ ಸಮಿತಿಯ ಪ್ರಮುಖರು, ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಕಾರ್ಮಿಕ ನಾಯಕ ಸದಾಶಿವ ಶೆಟ್ಟಿ, ವೈ ರಾಘವೇಂದ್ರ ರಾವ್, ಶ್ರೀನಾಥ್ ಕುಲಾಲ್, ಆನಂದ ಅಮೀನ್, ಶ್ರೀಕಾಂತ್ ಸಾಲ್ಯಾನ್, ಮಕ್ಸೂದ್ ಕಾನ, ಇಕ್ಬಾಲ್ ಕಿಲ್ಪಾಡಿ, ಅಬೂಬಕ್ಕರ್ ಬಾವಾ ಜೋಕಟ್ಟೆ, ಚಂದ್ರಕಾಂತ್ ದೇವಾಡಿಗ, ಹಂಝ ಇಡ್ಯಾ, ಸೈಫರ್ ಅಲಿ, ಇಮ್ತಿಯಾಜ್ ಕುಳಾಯಿ ನಾಮ ನಿರ್ದೇಶಿತ ಕಾರ್ಪೊರೇಟರ್ ಕಿಶೋರ್ ಶೆಟ್ಟಿ ಮುಂತಾದವರು ಇದ್ದರು.

    ಮಾರುಕಟ್ಟೆ ಕಟ್ಟಡದ ದಾರುಣ ಸ್ಥಿತಿಗಳನ್ನು ಮಾಧ್ಯಮಗಳು ಸುದ್ದಿ ಮಾಡಿ ನಾಲ್ಕೈದು ದಿನಗಳು ಕಳೆದಿದ್ದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆರೋಗ್ಯ ಇಲಾಖೆ, ನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ನೀರು, ತ್ಯಾಜ್ಯಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಸಿದ್ದರೂ ಯಾವುದೆ ದೊಡ್ಡ ಪರಿಣಾಮ ಆಗಿಲ್ಲ.

    ಕೆಲವು ಕಡೆ ಹತ್ತು, ಹನ್ನೆರಡು ಅಡಿ ಅಳದಷ್ಟು ನೀರು ನಿಂತಿದ್ದರೆ, ಕೆಲವು ಕಡೆ ತಳ ಮಹಡಿ ಪೂರ್ತಿ ನೀರಿನಲ್ಲಿ ಮುಳುಗಿದೆ. ಸಮಸ್ಯೆ ಇಷ್ಟು ಅಗಾಧವಾಗಿದ್ದರೂ, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದರೂ  ಕ್ರಮ ಕೈಗೊಳ್ಳದ ಬಗ್ಗೆ ನಿಯೋಗ ಅಚ್ಚರಿ ವ್ಯಕ್ತ ಪಡಿಸಿದೆ.

    ನಗರ ಪಾಲಿಕೆಯ ಮೇಯರ್, ಕಮೀಷನರ್, ಸ್ಥಾಯಿ ಸಮಿತಿಯ ಅಧ್ಯಕ್ಷರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮಗಳಿಗೆ ಬೇಕಾದ ಯೋಜನೆ ರೂಪಿಸಿ ಉಸ್ತುವಾರಿ ವಹಿಸದಿರುವುದು   ಪಾಲಿಕೆಯ ಜಡತ್ವಕ್ಕೆ ಉದಾಹರಣೆಯಾಗಿದೆ. ಸರೋಪಾದಿಯಾಗಿ ಕ್ರಮಗಳನ್ನು ಜರುಗಿಸಿ ಕಟ್ಟಡದ ಆವರಣದಲ್ಲಿ ಮಳೆ ನೀರು ನಿಲ್ಲದಂತೆ ಮಾಡದಿದ್ದಲ್ಲಿ ಸಮಾನ ಮನಸ್ಕರನ್ನೆಲ್ಲ ಜೊತೆ ಸೇರಿಸಿ ಸ್ಥಳದಲ್ಲೆ ವಿಭಿನ್ನವಾಗಿ ಪ್ರತಿಭಟನೆ ನಡೆಸುವುದಾಗಿ  ಎಚ್ಚರಿಕೆ ನೀಡಿತು. ಸ್ಮಾರ್ಟ್ ಸಿಟಿ ಎಂಬ ಹಣೆ ಪಟ್ಟಿಯ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ನಿವೃತ್ತಿ ಹೊಂದಿ ದಶಕಗಳೇ ಕಳೆದ್ರೂ ಆಳುವ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಗೆ ಇನ್ನು ಕೂಡ ಅವರೇ ಬೇಕಾಗಿದ್ದಾರೆ..!!!

     

    Share Information
    Advertisement
    Click to comment

    You must be logged in to post a comment Login

    Leave a Reply