BELTHANGADI
ಧರ್ಮಸ್ಥಳ ಸೌಜನ್ಯ ಪ್ರಕರಣ ನ್ಯಾಯಾಂಗ ಸುಪರ್ದಿಯಲ್ಲಿ ತನಿಖೆಗೆ ಆಗ್ರಹ- ಬೆಳ್ತಂಗಡಿಗೆ ಹರಿದು ಬಂದ ಜನಸಾಗರ..!
ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆ ಆಗ್ರಹಿಸಿ ನಾಡಿನ ಮೂಲೆ ಮೂಲೆಗಳಲ್ಲಿ ಪ್ರತಿಭಟನೆಗಳು ನಡೆದಿದ್ದು ಇಂದು ಭಾನುವಾರ ಬೆಳ್ತಂಗಡಿಯಲ್ಲಿ ಬೃಹತ್ ನಿರ್ಣಾಯಕ ಪ್ರತಿಭಟನಾ ಸಭೆ ಆರಂಭವಾಗಿದೆ,
ಬೆಳ್ತಂಗಡಿ : ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆ ಆಗ್ರಹಿಸಿ ನಾಡಿನ ಮೂಲೆ ಮೂಲೆಗಳಲ್ಲಿ ಪ್ರತಿಭಟನೆಗಳು ನಡೆದಿದ್ದು ಇಂದು ಭಾನುವಾರ ಬೆಳ್ತಂಗಡಿಯಲ್ಲಿ ಬೃಹತ್ ನಿರ್ಣಾಯಕ ಪ್ರತಿಭಟನಾ ಸಭೆ ಆರಂಭವಾಗಿದೆ,
ನಾಡಿನ ಮೂಲೆ ಮೂಲೆಗಳಿಂದ ಜನ ಸಾಗರವೇ ಬೆಳ್ತಂಗಡಿಗೆ ಹರಿದು ಬಂದಿದೆ.
ಸೌಜನ್ಯಳ ಹತ್ಯೆಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ಆರಂಭದಿಂದಲ್ಲೂ ಮುಂಚೂಣಿಯಲ್ಲಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh shetty Timarodi) ನೇತೃತ್ವದ ಪ್ರಜಾಪ್ರಭುತ್ವ ವೇದಿಕೆ ಮತ್ತು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಈ ಬೃಹತ್ ಹಕ್ಕೊತ್ತಾಯ ಸಭೆಯನ್ನು ಆಯೋಜಿಸಿದೆ.
ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷರಾದ ಹನುಮಂತಯ್ಯ, ಒಕ್ಕಲಿಗರ ಕಾವೂರು ಶಾಖಾ ಮಠದ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ, ಶ್ರೀ ರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಮಾಜಿ ಪೊಲೀಸ್ ಅಧಿಕಾರಿ, ಸಮಾಜಿಕ ಹೋರಾಟಹಾರ ಗಿರೀಶ್ ಮಟ್ಟಣ್ಣವರ್, ತಮ್ಮಣ್ಣ ಶೆಟ್ಟಿ , ಸಾಮಾಜಿಕ ಹೋರಾಟಗಾರ್ತಿ ಶ್ರೀಮತಿ ಪ್ರಸನ್ನ ರವಿ, ಮಾನವ ಹಕ್ಕು ಆಯೋಗದ ಕಾರ್ಯದರ್ಶಿ ಶ್ರೀಮತಿ ಗೀತಾ, ಪರಶುರಾಮ, ಹೈಕೋರ್ಟ್ ವಕೀಲ ಶ್ರೀನಿವಾಸ್, ಹರೀಶ್ ಬರೆಮೇಲು, ಸಂದೀಪ್, ಮೋಹಿತಾ ಕುಮಾರಿ, ಸೌಜನ್ಯಳದ ತಾಯಿ ಕುಸುಮಾವತಿ, ವಿವಿಧ ಸಮಾಜದ ಮುಂದಾಳುಗಳು, ಧಾರ್ಮಿಕ ನಾಯಕರುಗಳು ಈ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಕುಮಾರಿ ಸೌಜನ್ಯ ಗೌಡಳ ಸಾವಿನ ಪ್ರಕರಣವನ್ನು ಸೌಜನ್ಯ ಪ್ರಕರಣ ನ್ಯಾಯಾಂಗ ಸುಪರ್ದಿಯಲ್ಲಿ ವಿಶೇಷ ತನಿಖಾ ತಂಡ ರಚನೆ, ಈಕೆಯ ಕೊಲೆ ಕೃತ್ಯದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಅವರನ್ನು ರಕ್ಷಿಸುತ್ತ ಬಂದ ಪ್ರಭಾವಿಗಳಿಗೆ ಕೂಡಾ ಶಿಕ್ಷೆ ವಿಧಿಸಬೇಕು ಪ್ರಮುಖ ಬೇಡಿಕೆ ಈ ಹಕ್ಕೊತ್ತಾಯದ ಸಮಾವೇಶದಲ್ಲಿ ಮಂಡನೆಯಾಗಿದೆ.
ಸಮಾವೇಶ ನಡೆಯುವ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿದ್ದು ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ.