DAKSHINA KANNADA
ಕಾಂಗ್ರೆಸ್ ಸಮಾವೇಶ, ಮುಖಂಡರ ಬಗ್ಗೆ ಅಪಪ್ರಚಾರ :ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..!

ಮಂಗಳೂರು : ಫೆ.17ರಂದು ನಗರದ ಅಡ್ಯಾರ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಸಮಾವೇಶದಲ್ಲಿ ಭಾಗವಹಿಸಿದ ಕಾಂಗ್ರೆಸ್ ಮುಖಂಡರುಗಳ ಬಗ್ಗೆ ಅಪಪ್ರಚಾರ ಮಾಡಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫೆ.17ರಂದು ಮಂಗಳೂರಿನ ಆಡ್ಯಾರ್‌ನಲ್ಲಿ ಕಾಂಗ್ರೆಸ್ ನ ರಾಜ್ಯ ಮಟ್ಟದ ಸಮಾವೇಶ ನಡೆದಿರುತ್ತದೆ. ಈ ಸಮಾವೇಶಕ್ಕೆ ಪಕ್ಷದ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ಬಹು ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ. ಇದನ್ನು ಸಹಿಸದ ಬೇರೆ ಪಕ್ಷದ ನಾಯಕರೊಬ್ಬರ ಜೊತೆ ಗುರುತಿಸಿಕೊಂಡಿರುವ ಕೆಲವರು ಕಾಂಗ್ರೆಸ್ ಜಿಲ್ಲಾ ನಾಯಕರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ಸುಳ್ಳು ಮಾಹಿತಿಯನ್ನು ಹರಡಿಸಿ ಮಾನಹಾನಿ ಮಾಡಿರುತ್ತಾರೆ.

“Ex-MLA Dr.MBava fans” ವಾಟ್ಸಾಪ್ ಗ್ರೂಪ್ ಗೆ ಮುನಾವರ್ ಯಾನೆ ಶರೀಫ್, ಮುಹಮ್ಮದ್ ಇಮ್ರಾನ್ ಚೊಕ್ಕಬೆಟ್ಟು ಮತ್ತು “2023 ಶಾಸಕರು ಮೊಯ್ದಿನ್ ಬಾವ” ವಾಟ್ಸ್ ಆಫ್ ಗ್ರೂಪ್ ಗೆ ಶಯಾನ್ ಎಂಬವರು ಸಂದೇಶಗಳನ್ನು ಕಳುಹಿಸಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.