LATEST NEWS
ಸ್ಟೇಟಸ್ ಕಥೆಗಳು ಕಥಾಸಂಕಲನದ ಬಿಡುಗಡೆ ಸಂಭ್ರಮದಲ್ಲಿ ಲೇಖಕ ಧೀರಜ್ ಬೆಳ್ಳಾರೆ

ಉಡುಪಿ : ತ್ರಿಶಾ ಸಮೂಹ ಸಂಸ್ಥೆಗಳ ಕನ್ನಡ ಪ್ರಾಧ್ಯಾಪಕ ಧೀರಜ್ ಅವರ ತಂದೆ ತಾಯಿ ಜೊತೆಗೆ ವಿದ್ಯಾರ್ಥಿಗಳಿಂದ ಚೊಚ್ಚಲ ಕಥಾ ಸಂಕಲನ ಸ್ಟೇಟಸ್ ಕಥೆಗಳು ಪುಸ್ತಕ ಬಿಡುಗಡೆಯಾಯಿತು.
ಲೇಖಕ ಧೀರಜ್ ಅವರು ಕಾರ್ಯಕ್ರಮದಲ್ಲಿ ತಮ್ಮ ಕಥೆಗಳಿಗೆ ಸ್ಫೂರ್ತಿಯಾಗಿರುವ ಬಗ್ಗೆ ಹಾಗೂ ತಾನು ನಡೆದು ಬಂದ ಹಾದಿಯ ಕುರಿತು ಮಾತನಾಡಿದರು.

ಸ್ಪಂದನ ವಾಹಿನಿ ಮುಖ್ಯ ಸಂಪಾದಕ ನಾಗರಾಜ ವರ್ಕಾಡಿ ಮಾತನಾಡಿ ಬದ್ದತೆ ಇದ್ದಾಗ ಮಾತ್ರ ಸಾಧನೆಗಳು ಸಾದ್ಯವಾಗುತ್ತದೆ ಎಂದರು. ತ್ರಿಶಾ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಸಿ. ಎ ಗೋಪಾಕೃಷ್ಣ ಭಟ್ ರವರು ಸ್ಟೇಟಸ್ ಕಥೆಗಳು ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲರಾದ ಗುರುಪ್ರಸಾದ್ ರಾವ್, ತ್ರಿಶಾ ಸಂದ್ಯಾ ಕಾಲೇಜಿನ ಪ್ರಾಂಶುಪಾಲರಾದ ಇಂದುರೀತಿ, ಸಿದ್ದಾಂತ್ ಪೌಂಡೇಶನ್ ಟ್ರಸ್ಟಿ ನಮಿತಾ ಜಿ ಭಟ್ ಉಪಸ್ಥಿತರಿದ್ದರು, ಮೇಘನಾ ಭಟ್ ನಿರೂಪಿಸಿ,ತೇಜಸ್ವಿ ದೇವಾಡಿಗ ವಂದಿಸಿದರು.