LATEST NEWS
ದೀಪಕ್ ರಾವ್ ಕುಟುಂಬಕ್ಕೆ ಹರಿದು ಬಂದ ಸಹಾಯ ಹಸ್ತದ ಮಹಾಪೂರ : 24 ಲಕ್ಷ ರೂ ಸಂಗ್ರಹ

ಮಂಗಳೂರು, ಜನವರಿ 06 : ಜನವರಿ ಮೂರರಂದು ಸುರತ್ಕಲಿನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ದೀಪಕ್ ರಾವ್ ಕುಟುಂಬಕ್ಕೆ ಆನೇಕ ದಾನಿಗಳಿಂದ ಸಹಾಯ ಹಸ್ತದ ಮಹಾ ಪೂರವೇ ಹರಿದು ಬಂದಿದೆ.
ಸಾರ್ವಜನಿಕ ಅಭಿಯಾನ ಮೂಲಕ ಇದುವರೆಗೆ ಒಟ್ಟು 24 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದೆ.

ಸಿಂಡಿಕೇಟ್ ಬ್ಯಾಂಕ್ ಕಾಟಿಪಳ್ಳ ಶಾಖೆಯಲ್ಲಿ ದೀಪಕ್ ರಾವ್ ಅವರ ತಾಯಿ ಪ್ರೇಮಾ ಅವರ ಖಾತೆಗೆ ಶುಕ್ರವಾರದ ವರೆಗೆ 17 ಲಕ್ಷ ರೂಪಾಯಿಗಳ ಹಣ ಜಮಾ ಅಗಿದೆ.
ಇದಲ್ಲದೇ ರಾಜ್ಯ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ನೀಡಿತ್ತು.
ದೀಪಕ್ ರಾವ್ ಕುಟುಂಬಕ್ಕೆ ಸಹಾಯದ ಹಸ್ತ ನೀಡಲು ಫೇಸ್ ಬುಕ್ , ವಾಟ್ಸ್ ಅಪ್ ಮೂಲಕ ಅಭಿಯಾನ ನಡೆಸಿ ಮನವಿ ಮಾಡಲಾಗಿತ್ತು.
ಸ್ಥಳೀಯ ಶಾಸಕ ಮೊಯಿದಿನ್ ಬಾವ ನೀಡಿದ ಐದು ಲಕ್ಷ ಪರಿಹಾರವನ್ನು ದೀಪಕ್ ಕುಟುಂಬ ನಿರಾಕರಿಸಿತ್ತು.