LATEST NEWS
ನಾಪತ್ತೆಯಾಗಿದ್ದ ಯುವಕನ ಶವ ಸಸಿಹಿತ್ಲು ಮುಂಡ ಬೀಚ್ ಬಳಿ ಪತ್ತೆ

ಮಂಗಳೂರು, ಜುಲೈ 20: ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊರ್ವರ ಶವ ಸಸಿಹಿತ್ಲು ಮುಂಡ ಬೀಚ್ ಬಳಿ ಪತ್ತೆಯಾಗಿದೆ.
ಮೃತರನ್ನು ಮುಕ್ಕ ನಿವಾಸಿ ಕಿರಣ್ ಶೆಟ್ಟಿ (42) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿದ್ದ ಕಿರಣ್ ಶೆಟ್ಟಿ ಪಾಲುದಾರಿಕೆಯಲ್ಲಿ ಅಂಗಡಿ ನಡೆಸುತ್ತಿದ್ದರು. ಕೋವಿಡ್ ಕಾರಣದಿಂದ ವ್ಯಾಪಾರ ಇಲ್ಲದೆ ಹಣದ ಸಮಸ್ಯೆಯಿಂದ ಇದ್ದರು ಎಂದು ಕುಟುಂಬಸ್ಥರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಕಳೆದ ಒಂದು ವಾರದ ಹಿಂದೆ ಇವರು ನಾಪತ್ತೆಯಾಗಿದ್ದರು, ಇಂದು ಅವರ ಮೃತದೇಹ ಸಸಿಹಿತ್ಲು ಮುಂಡ ಬೀಚ್ ಬಳಿ ಪತ್ತೆಯಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
