LATEST NEWS
ಅಂಬ್ಯುಲೆನ್ಸ್ ಕೊಡಲು ಹಣ ಇಲ್ಲದೆ ಟೂರಿಸ್ಟ್ ಕಾರಿನಲ್ಲಿ ಮೃತದೇಹ ಸಾಗಾಟ – ರಸ್ತೆ ಮಧ್ಯೆ ಅಡ್ಡಗಟ್ಟಿ ಆಂಬ್ಯುಲೆನ್ಸ್ ಚಾಲಕನಿಂದ ತರಾಟೆ
ಉಡುಪಿ, ಮೇ.12: ಟೂರಿಸ್ಟ್ ಕಾರಿನಲ್ಲಿ ಡೆಡ್ ಬಾಡಿ ಸಾಗಿಸುತ್ತಿದ್ದ ವೇಳೆ ಆಂಬ್ಯುಲೆನ್ಸ್ ಚಾಲಕರೊಬ್ಬರು ಕಾರನ್ನು ಅಡ್ಡಗಟ್ಟಿ ತರಾಟೆಗೆ ತೆಗೆದುಕೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಉಡುಪಿಯಿಂದ ಉತ್ತರಕನ್ನಡಕ್ಕೆ ಹೋಗಲು ಆಂಬ್ಯುಲೆನ್ಸ್ ಮಾಲೀಕ 15 ಸಾವಿರ ರೂಪಾಯಿ ಹಣ ಕೇಳಿದರು. ಹೆಚ್ಚಿನ ದುಡ್ಡು ಕೇಳಿದ್ದರಿಂದ ಸಂಬಂಧಿಕರು ಹಣ ಇಲ್ಲದೆ ಟೂರಿಸ್ಟ್ ಕಾರು ಗೊತ್ತುಪಡಿಸಿದ್ದಾರೆ. ಇದರ ಮಾಹಿತಿ ತಿಳಿದಿದ್ದ ಆಂಬ್ಯುಲೆನ್ಸ್ ಚಾಲಕರು ಕಾರನ್ನು ಬೈಂದೂರಿನ ಶಿರೂರಿನಲ್ಲಿ ಇತರೆ ಆಂಬುಲೆನ್ಸ್ ಚಾಲಕರು ತಡೆದಿದ್ದರು.
ಅಲ್ಲದೆ ಈ ವೇಳೆ ಕಾರಿನ ಚಾಲಕನನ್ನು ಅಂಬ್ಯುಲೆನ್ಸ್ ಚಾಲಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೆ ಕಾರು ಚಾಲಕ ಹಾಗೂ ಮೃತದೇಹದ ವಾರೀಸುದಾರರನ್ನು ಬೈಂದೂರು ಪೊಲೀಸರು ಠಾಣೆ ಕರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋವನ್ನ ಆಧರಿಸಿ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತು ಮಾತನಾಡಿ, ‘ಈಗಾಗಲೆ ಟೂರಿಸ್ಟ್ ಕಾರಿನಲ್ಲಿ ಮೃತದೇಹವನ್ನ ಕೊಂಡೊಯ್ದಿದ್ದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ಉತ್ತರ ಕನ್ನಡದ ಕುಟುಂಬವೊಂದು ಟೂರಿಸ್ಟ್ ಕಾರಿನ ಡಿಕ್ಕಿಯಲ್ಲಿರಿಸಿ ಮೃತದೇಹವನ್ನ ಕೊಂಡೊಯ್ದಿತ್ತು. ಬಳಿಕ ಆಂಬ್ಯುಲೆನ್ಸ್ ಚಾಲಕರು, ಕಾರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದರು.