LATEST NEWS
ತೊಕ್ಕೊಟ್ಟು ರೈಲ್ವೆ ಹಳಿ ಬಳಿ ಬ್ಯಾಂಕ್ ಉದ್ಯೋಗಿ ಶವಪತ್ತೆ ..ಆತ್ಮಹತ್ಯೆ ಶಂಕೆ

ಮಂಗಳೂರು ಫೆಬ್ರವರಿ 14: ತೊಕ್ಕೊಟ್ಟು ರೈಲ್ವೆ ಹಳಿಯ ಬಳಿ ಬ್ಯಾಂಕ್ ಉದ್ಯೋಗಿಯೋರ್ವರ ಶವ ಪತ್ತೆಯಾಗಿದ್ದು, ಆತ್ನಹತ್ಯೆ ಎಂದು ಶಂಕಿಸಲಾಗಿದೆ. ಮೃತರನ್ನು ಮದ್ದೂರು ನಿವಾಸಿ ಸತೀಶ್ ಚಂದ್ರ ಎಂದು ಗುರುತಿಸಲಾಗಿದೆ.
ಸತೀಶ್ಚಂದ್ರ ಕೆನರಾ ಬ್ಯಾಂಕ್ ನ ಉದ್ಯೋಗಿಯಾಗಿದ್ದು, ಸಾಲೆತ್ತೂರು ಶಾಖೆಯಿಂದ ಕೊಡಗಿನ ಮಡಿಕೇರಿಗೆ ವರ್ಗಾವಣೆಯಾಗಿದ್ದರು. ಇಂದು ರಜೆ ಹಿನ್ನಲೆ ಮಡಿಕೇರಿಯಿಂದ ಊರಿಗೆ ಬಂದಿದ್ದ ಅವರು ತೊಕ್ಕೊಟ್ಟಿಗೆ ಹೋಗಿ ಬರುವುದಾಗಿ ಹೇಳಿದವರು ಮತ್ತೆ ವಾಪಾಸ್ ಬಂದಿರಲಿಲ್ಲ.

ತೊಕ್ಕೊಟ್ಟು ರೈಲ್ವೆ ಹಳಿಯ ಬಳಿ ಸತೀಶ್ ಚಂದನ್ ಅವರ ಶವ ಪತ್ತೆಯಾಗಿದ್ದು, ಚಲಿಸುತ್ತಿರುವ ರೈಲಿನ ಮುಂದೆ ನಿಂತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.