LATEST NEWS
ಕಾಂತಮಂಗಲ – ಪಯಸ್ವಿನಿ ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆ

ಸುಳ್ಯ ಸೆಪ್ಟೆಂಬರ್ 03: ಕಾಂತಮಂಗಲ ಬಳಿ ಪಯಸ್ವಿನಿ ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆಯಾಗಿದೆ.
ಮೃತ ಯುವಕನನ್ನು ಅಜ್ಜಾವರ ಗ್ರಾಮದ ಮಾವಿನಪಳ್ಳ ನಿವಾಸಿ ಮಹಮ್ಮದ್ ಎಂಬವರ ಪುತ್ರ ಸಿನಾನ್ (30) ಎಂದು ಗುರುತಿಸಲಾಗಿದೆ. ಸೋಮವಾರ ಸುಳ್ಯಕ್ಕೆ ತೆರಳಿದ್ದ ಈತ ಮನೆಗೆ ಮರುಳುವ ಸಂದರ್ಭದಲ್ಲಿ ಕಾಂತಮಂಗಲ ಸೇತುವೆಯಿಂದ ನದಿಗೆ ಧುಮುಕಿದ್ದಾನೆ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿದ ಕೂಡಲೇ ಆತನಿಗಾಗಿ ಹುಡುಕಾಟ ಪ್ರಾರಂಭಿಸಲಾಗಿದ್ದು, ಮಂಗಳವಾರ ಮುಂಜಾನೆ ಮೃತದೇಹ ಪತ್ತೆಯಾಗಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading