Connect with us

    LATEST NEWS

    ಪ್ರತೀ ಪೋಸ್ಟ್​​ಗೆ 12ಲಕ್ಷ ರೂ. ಪಡೆಯುವ ವಿಶ್ವದ ಶ್ರೀಮಂತ ಬೆಕ್ಕು!

    ವಿಶ್ವದ ಅತ್ಯಂತ ಶ್ರೀಮಂತ ಬೆಕ್ಕು ಎಂದು ಪರಿಗಣಿಸಲ್ಪಟ್ಟಿರುವ ಈ ಬೆಕ್ಕಿನ ಹೆಸರು ನಳ. ಈ ಬೆಕ್ಕು 852 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ ಬೆಕ್ಕು ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಕೂಡ ಈ ಬೆಕ್ಕು ಪಡೆದುಕೊಂಡಿದೆ.

    ಫೋರ್ಬ್ಸ್ ಪಟ್ಟಿಯಲ್ಲಿ ಜಾಗ ಪಡೆದಿರುವ ವಿಶ್ವದ ಶ್ರೀಮಂತ ಬೆಕ್ಕು ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಈ ಬೆಕ್ಕು ಬರೀ ಇನ್ಸ್ಟಾಗ್ರಾಮ್​​ನಲ್ಲಿ ಪ್ರತೀ ಪೋಸ್ಟ್​​ಗೆ 12ಲಕ್ಷ ರೂ. ಸಂಭಾವನೆಯನ್ನು ಪಡೆಯುತ್ತದೆ. ಇದಲ್ಲದೇ ಅತ್ಯಂತ ಜನಪ್ರಿಯ ಬೆಕ್ಕು ಎಂದೇ ಗಿನ್ನೆಸ್​ ವಿಶ್ವ ದಾಖಲೆಯನ್ನೂ ಪಡೆದುಕೊಂಡಿದೆ.

    ವಿಶ್ವದ ಅತ್ಯಂತ ಶ್ರೀಮಂತ ಬೆಕ್ಕು ಎಂದು ಪರಿಗಣಿಸಲ್ಪಟ್ಟಿರುವ ಈ ಬೆಕ್ಕಿನ ಹೆಸರು ನಳ(Nala). ಈ ಬೆಕ್ಕು 852 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದೆ. ಇನ್ಸ್ಟಾಗ್ರಾಮ್​​ನಲ್ಲಿ ಸಖತ್​ ಆಕ್ಟೀವ್​ ಆಗಿರುವ ಈ ಬೆಕ್ಕು 4.5 ಮಿಲಿಯನ್​​ ಅಂದರೆ ಬರೋಬ್ಬರಿ 40 ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದೆ.

    ಯುನೈಟೆಡ್ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಪೂಕಿ ಎಂದು ಕರೆಯಲ್ಪಡುವ ಮಹಿಳೆ ಈ ಬೆಕ್ಕನ್ನು ಲಾಸ್ ಏಂಜಲೀಸ್‌ನ ಪ್ರಾಣಿಗಳ ರಕ್ಷಣಾ ಆಶ್ರಯದಿಂದ 4 ತಿಂಗಳ ಈ ಬೆಕ್ಕಿನ ಮರಿಯನ್ನು ದತ್ತು ತೆಗೆದುಕೊಂಡಿದ್ದಳು. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ ಬೆಕ್ಕು ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಕೂಡ ಈ ಬೆಕ್ಕು ಪಡೆದುಕೊಂಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply