LATEST NEWS
ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದ ಯುವ ವೈದ್ಯೆ ನಿಧನ

ಗೋವಾ ಅಗಸ್ಟ್ 18 :ಯುವ ವೈದ್ಯೆಯೊಬ್ಬರು ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಹೃದಯಾಘಾತದಿಂದ ನಿಧನರಾದ ಘಟನೆ ಶಿರೋಡಾದಲ್ಲಿ ನಡೆದಿದೆ. 2011 ರಿಂದ ಶಿರೋಡಾ ಪಿಎಚ್‌ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ವೈದ್ಯಾಧಿಕಾರಿ ಡಾ. ಅಕ್ಷಯ ಮಧುಕರ್ ಪಾವಸ್ಕರ್ (38) ಹೃದಯಾಘಾತದಿಂದ ಸಾವನಪ್ಪಿದವರು.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಕರ್ತವ್ಯದಿಂದಾಗಿ ಕೋವಿಡ್ ವಾರಿಯರ್ ಎಂದು ಅವರನ್ನು ಕರೆಯಲಾಗಿತ್ತು. ಅಲ್ಲದೆ ಅವರ ಸೇವಾಮನೋಭಾವದಿಂದಾಗಿ ಭಾರೀ ಜನಪ್ರೀಯರಾಗಿದ್ದು, ಸರಕಾರ ಅವರಿಗೆ ಸನ್ಮಾನ ಕೂಡ ಮಾಡಿತ್ತು.

ಡಾ ಅಕ್ಷಯಾ ಮಂಗಳವಾರ ರಾತ್ರಿ ಕರ್ತವ್ಯದಲ್ಲಿದ್ದರು ಮತ್ತು 17 ರೋಗಿಗಳ ವೈದ್ಯಕೀಯ ತಪಾಸಣೆಯನ್ನು ಸಹ ನಡೆಸಿದರು, ನಂತರ ಅವರು ರಾತ್ರಿ 9 ಗಂಟೆಯ ಸುಮಾರಿಗೆ ತಮ್ಮ ವಿಶ್ರಾಂತಿ ಕೊಠಡಿಗೆ ತೆರಳಿದರು.
ರಾತ್ರಿ ಕೆಲವು ಹೊಸ ರೋಗಿಗಳನ್ನು ಪಿಎಚ್‌ಸಿಗೆ ದಾಖಲಿಸಿದ ನಂತರ, ಕರ್ತವ್ಯದಲ್ಲಿದ್ದ ನರ್ಸ್ ವೈದ್ಯರನ್ನು ಕರೆಯಲು ಹೋಗಿದ್ದಾರೆ, ಆದರೆ ಈ ವೇಳೆ ಅಕ್ಷಯಾ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಕೂಡಲೇ ರೂಮ್ ನ ಬಾಗಿಲು ತೆಗೆದು ನೋಡಿದಾಗ ಅವರು ಹಾಸಿಗೆ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಮುಂದಾಗಿದ್ದರೂ ಕೂಡ ಅವರು ಅದಾಗಲೇ ಹೃದಯಾಘಾತದಿಂದ ನಿಧನರಾಗಿದ್ದರು.