LATEST NEWS
ಮಳೆಗಾಲ ಆರಂಭವಾಗುವರೆಗೆ ನೀರನ್ನು ಮಿತವಾಗಿ ಬಳಸಿ – ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮನವಿ

ಉಪ್ಪಿನಂಗಡಿ ಎಪ್ರಿಲ್ 18: ಮುಂಗಾರು ಮಳೆ ಆರಂಭವಾಗುವರೆಗೆ ನೀರನ್ನು ಮಿತವಾಗಿ ಬಳಸುವಂತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜನರಲ್ಲಿ ಮನವಿ ಮಾಡಿದ್ದಾರೆ.
ಗ್ರಾಮೀಣ ನೀರು ಪೂರೈಕೆ ಯೋಜನೆಗಳಿಗೆ ನೀರು ಲಭ್ಯತೆಯನ್ನು ಖಾತರಿ ಪಡಿಸುವ ಸಲುವಾಗಿ ಬಿಳಿಯೂರು ಅಣೆಕಟ್ಟಿನಲ್ಲಿ ಸಂಗ್ರಹವಿರುವ ನೀರನ್ನು ಎ ಎಂ ಆರ್ ಅಣೆಕಟ್ಟಿಗೆ ಇಂದು ಹರಿಸಲಾಗುತ್ತಿದ್ದು, ಈಗಾಗಲೇ ಕೈಗಾರಿಕೆ ಮತ್ತು ಕೃಷಿಗೆ ಅಣೆಕಟ್ಟು ನೀರು ಬಳಕೆಯನ್ನು ನಿಷೇಧಿಸಲಾಗಿದೆ. ನಾಗರಿಕರು ನೀರನ್ನು ಮಿತವಾಗಿ ಹಾಗೂ ಜವಾಬ್ಧಾರಿಯುತವಾಗಿ ಬಳಕೆ ಮಾಡಬೇಕು. ರೈತರು ಮತ್ತು ಕೈಗಾರಿಕೆಗಳು ಸಂಪೂರ್ಣ ಸಹಕಾರ ನೀಡುವ ಮೂಲಕ ಲಭ್ಯ ಇರುವ ನೀರನ್ನು ಮಳೆಗಾಲ ಆರಂಭವಾಗುವವರೆಗೆ ಬಳಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
