DAKSHINA KANNADA
ಪುತ್ತೂರು – ಮುಂಬೈ ಜಾಹಿರಾತು ಫಲಕ ದುರಂತದ ಬಳಿಕ ಜಿಲ್ಲೆಯಲ್ಲೂ ಅಪಾಯಕಾರಿ ಜಾಹಿರಾತು ಫಲಕ ತೆರವುಗೊಳಿಸಲು ಮುಂದಾದ ಅಧಿಕಾರಿಗಳು

ಪುತ್ತೂರು ಮೇ 15: ಮುಂಬೈನಲ್ಲಿ ಇತ್ತೀಚೆಗೆ ಬಂದ ಬಿರುಗಾಳಿಗೆ ಭಾರೀ ದೊಡ್ಡ ಗಾತ್ರದ ಜಾಹಿರಾತು ಫಲಕ ಪೆಟ್ರೋಲ್ ಪಂಪ್ ಮೇಲೆ ಬಿದ್ದು 14ಕ್ಕೂ ಅಧಿಕ ಮಂದಿ ಸಾವನಪ್ಪಿದ್ದರು. ಈ ಪ್ರಕರಣದ ಬೆನ್ನಲ್ಲೇ ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು ಅಪಾಯಕಾರಿಯಾಗಿರುವ ಜಾಹಿರಾತು ಫಲಕಗಳನ್ನು ತೆಗೆಯಲು ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಜಿಲ್ಲಾಧಿಕಾರಿಯವರು ಈಗಾಗಲೇ ಎಲ್ಲಾ ನಗರ ಪಾಲಿಕೆ,ನಗರಸಭೆ, ಪುರಸಭೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನಲೆ ಉಪವಿಭಾಗದ ಕಡೆಯಿಂದ ನಾವು ಕೂಡ ಅಪಾಯಕಾರಿ ಜಾಹೀರಾತು ಫಲಕ ಮತ್ತು ಅನಧಿಕೃತ ಫಲಕಗಳನ್ನು ತೆರವುಗೊಳಿಸಲು ಒಂದು ವಾರದ ಗಡು ನೀಡಲಾಗಿದೆ ಎಂದರು.

ಇನ್ನು ಮಳೆಗಾಲದ ಮೊದಲು ರಾಜ ಕಾಲುವೆಗಳ ದುರಸ್ತಿಗೂ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಉಪ ವಿಭಾಗದ ಎಲ್ಲಾ ಸೇತುವೆ,ರಾಜ ಕಾಲುವೆ ದುರಸ್ತಿ ಕಾರ್ಯವನ್ನು ಆರಂಭಿಸಲಾಗಿದೆ.