FILM
19ನೇ ವಯಸ್ಸಿಗೆ ಸಾವನಪ್ಪಿದ ‘ದಂಗಲ್’ ಸಿನಿಮಾದ ಕಿರಿಯ ಬಬಿತಾ ಪಾತ್ರದ ನಟಿ ಸುಹಾನಿ ಭಟ್ನಾಗರ್

ನವದೆಹಲಿ ಫೆಬ್ರವರಿ 17: ಹಿಂದಿ ಸೂಪರ್ ಹಿಟ್ ಚಿತ್ರ ದಂಗಲ್ ಸಿನೆಮಾದಲ್ಲಿ ಬಾಲಕಲಾವಿದೆಯಾಗಿ ನಟಿಸಿದ್ದ ಸುಹಾನಿ ಭಟ್ನಾಗರ್ ಸಾವನಪ್ಪಿದ್ದಾರೆ. ಅಮೀರ್ ಖಾನ್ ಅಭಿನಯದ ‘ದಂಗಲ್’ ಸಿನಿಮಾದಲ್ಲಿ ಸುಹಾನಿ ಕಿರಿಯ ಬಬಿತಾ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೀಗ ಇಂಡಸ್ಟ್ರಿಯಲ್ಲಿ ಶೋಕದ ಅಲೆ ಎದ್ದಿದೆ.
ಆಮಿರ್ ಖಾನ್ ಪ್ರೊಡಕ್ಷನ್ಸ್ ಅವರು ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ಸುಹಾನಿ ನಿಧನದ ವಿಷಯ ನಮಗೆ ತುಂಬ ಬೇಸರ ತಂದಿದೆ. ಸುಹಾನಿ ತಾಯಿ ಪೂಜಾ ಅವರಿಗೆ, ಇಡೀ ಕುಟುಂಬಕ್ಕೆ ಸಂತಾಪಗಳು. ಸುಹಾನಿ ಪ್ರತಿಭಾನ್ವಿತ ಹುಡುಗಿ, ಟೀಮ್ ಪ್ಲೇಯರ್ ಕೂಡ ಹೌದು. ಸುಹಾನಿ ಇಲ್ಲದೆ ದಂಗಲ್ ಸಿನಿಮಾ ಅಪೂರ್ಣ. ಸುಹಾನಿ ಸದಾ ನಮ್ಮ ಹೃದಯದಲ್ಲಿ ಇರುತ್ತಾರೆ, ಅವಳ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದೆ.

ಆಕೆಯ ಸಾವಿಗೆ ಕಾರಣ ಅಸ್ಪಷ್ಟವಾಗಿದ್ದರೂ, ಸುಹಾನಿ ತನ್ನ ಕಾಲಿನ ಮುರಿತಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ದೈನಿಕ್ ಜಾಗರಣ್ ಅವರ ವರದಿಯ ಪ್ರಕಾರ , ಅವರು ಸ್ವಲ್ಪ ಸಮಯದಿಂದ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.