BANTWAL
ಅಣ್ಣಾವ್ರ ಜೊತೆ ಹೆಜ್ಜೆ ಹಾಕಿದ ಸಚಿವ ರಮಾನಾಥ ರೈ

ಬಂಟ್ವಾಳ, ಆಗಸ್ಟ್ 28 : ವರ ನಟ ಡಾ. ರಾಜ್ ಕುಮಾರ್ ಮತ್ತು ಇತರ ನಾಯಕರೊಂದಿಗೆ ಹೆಜ್ಜೆ ಹಾಕಿದ ರಾಜ್ಯ ಅರಣ್ಯ ಹಾಗೂ ಪರಿಸರ ಸಚಿವ ರಮಾನಾಥ ರೈ ಇದೀಗ ಎಲ್ಲೆಡೆ ಸುದ್ದಿಯಲ್ಲಿದ್ದಾರೆ..!! ಒಂದೆಡೆ ರಾಜಕೀಯ ಮತ್ತೊಂದೆಡೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸ್ವ ಕ್ಷೇತ್ರದಲ್ಲಿನ ಇತ್ತೀಚಿನ ಅಹಿತಕರ ಬೆಳವಣಿಗೆಗಳಿಂದ ಸದಾ ಬಿಸಿ (bussy) ಯಲ್ಲಿರುವ ರಾಜ್ಯ ಅರಣ್ಯ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಬಂಟ್ವಾಳದಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವ ಮೂಲಕ ಗಣೇಶೋತ್ಸವ ಸಂಭ್ರಮಕ್ಕೆ ಕಳೆ ಹೆಚ್ಚಿಸಿದ್ದಾರೆ. ಸ್ವ ಕ್ಷೇತ್ರ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟುವಿನಲ್ಲಿ ಸಚಿವರಾದ ರಮಾನಾಥ ರೈ ಅವರ ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ 14 ನೇ ವರ್ಷದ
ಗಣೇಶೋತ್ಸವದಲ್ಲಿ ಪಾಲ್ಗೊಂಡ ಸಚಿವರು ತಮ್ಮ ದೈನಂದಿನ ಕೆಲಸದ ಒತ್ತಡ- ಜಂಜಟಗಳನ್ನು ಬದಿಗಿಟ್ಟು ನೃತ್ಯಕ್ಕೆ ಹೆಜ್ಜೆ ಹಾಕಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರಿನ ಜ್ಯೂನಿಯರ್ ರಾಜ್ ಕುಮಾರ್ ಖ್ಯಾತಿಯ ಅಶೋಕ್ ಭಸ್ತಿ ಬಳಗದಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ , ಉಪೇಂದ್ರ ಮತ್ತು ದುನಿಯ ವಿಜಿಯರನ್ನು ಹೋಲುವ ಕಲಾವಿದರೊಂದಿಗೆ ಹೆಜ್ಜೆ ಹಾಕಿ ಸಚಿವರು ಇದೀಗ ಮನೆಮಾತಾಗಿದ್ದಾರೆ.