BANTWAL
ಪದ್ಮಶ್ರೀ ಕದ್ರಿ ಗೋಪಾಲನಾಥ್ ಪುಣ್ಯಸ್ಮರಣೆಯಲ್ಲಿ ಅಸ್ವಸ್ಥರಾದ ಪತ್ನಿ : ವೈದ್ಯರಾಗಿ ಚಿಕಿತ್ಸೆ ನೀಡಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ

ಬಂಟ್ವಾಳ : ಪದ್ಮಶ್ರೀ ಪುರಸ್ಕೃತ ಕದ್ರಿ ಗೋಪಾಲನಾಥ್ ಅವರ ಎರಡನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ ಕದ್ರಿ ಗೋಪಾಲನಾಥ್ ಅವರ ಪತ್ನಿ ಸರೋಜಿನಿ ಅವರಿಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಅವರು ಚಿಕಿತ್ಸೆ ನೀಡಿ ಮೆಚ್ಚುಗೆಗೆ ಪಾತ್ರರಾದರು.
ಬಂಟ್ವಾಳದ ಸಜಿಪದಲ್ಲಿ ಡಾ.ಕದ್ರಿ ಗೋಪಾಲನಾಥ ಅವರ ಸ್ಮರಣಾರ್ಥ ಸೋಮವಾರ ಕದ್ರಿ ಸಂಗೀತ ಸೌರಭ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ವೇದಿಕೆ ಎದುರು ಕುಳಿತಿದ್ದ ಸರೋಜಿನಿ ಭಾವುಕರಾದರಲ್ಲದೆ ತಲೆ ಸುತ್ತು ಬಂದಂದಾಯಿತು. ಈ ಸಂದರ್ಭ ಅಲ್ಲಿದ್ದ ಜಿಲ್ಲಾಧಿಕಾರಿ ತಕ್ಷಣ ಅವರನ್ನು ಪರಿಶೀಲಿಸಿ, ಅವರಿಗೆ ಸಕ್ಕರೆ ನೀರು ಕೊಟ್ಟು ಆರೈಕೆ ಮಾಡಿದರು.

ಕದ್ರಿ ಗೋಪಾಲನಾಥರ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಡಾ.ಕದ್ರಿ ಗೋಪಾಲನಾಥ ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಲಾಗುತ್ತಿದ್ದು, ಸೋಮವಾರ ಮೋರ್ಸಿಂ ಗ್ ವಿದ್ವಾನ್ ಡಾ.ಎಲ್.ಭೀಮಾಚಾರ್ಯ ಮತ್ತು ಗಾಯಕ ಹುಲ್ಯಾಳ ಮಹದೇವಪ್ಪ ಅವರಿಗೆ ಈ ವರ್ಷದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.