Connect with us

DAKSHINA KANNADA

ಕಡಬದ ಕೆನರಾ ಬ್ಯಾಂಕಿನಲ್ಲಿ ಅಡವಿಟ್ಟ ಚಿನ್ನದ ಕಿವಿಯೋಲೆ ನಾಪತ್ತೆ..ಪೊಲೀಸ್ ದೂರು ಬಳಿಕ ಪತ್ತೆ..!!

ಕಡಬ : ಅಡವಿಟ್ಟ ಚಿನ್ನದಲ್ಲಿ ಕಿವಿಯೋಲೆಯೊಂದು ನಾಪತ್ತೆಯಾಗಿದ್ದು, ಬ್ಯಾಂಕ್ ಅಧಿಕಾರಿಗಳ ದುರಂಹಕಾರಕ್ಕೆ ಪೊಲೀಸರಿಗೆ ದೂರು ನೀಡಿದ ಬಳಿಕ ಎಚ್ಚೆತ್ತ ಬ್ಯಾಂಕ್ ಅಡವಿಟ್ಟವರಿಗೆ ಚಿನ್ನ ವಾಪಾಸ್ ನೀಡಿದೆ.


ಕೋಡಿಂಬಾಳ ಗ್ರಾಮದ ಮಡ್ಯಡ್ಕ ನಿವಾಸಿ ಪುಷ್ಪಲತಾ ಎಂಬುವರು ಕೆನರಾ ಬ್ಯಾಂಕ್ ನ ಕಡಬ ಶಾಖೆಯಲ್ಲಿ ಒಂದು ಚೈನ್, ಎರಡು ಬಿಳಿ ಕಲ್ಲಿನ ಪ್ಲೇಟ್ ಬೆಂಡು ಹಾಗೂ ಒಂದು ಟಿಕ್ಕಿ (ಕಿವಿಯೋಲೆ) ಯನ್ನು ಭದ್ರತೆಯಾಗಿ ಇಟ್ಟು 32,000. ರೂಪಾಯಿ ಸಾಲ ಪಡೆದಿದ್ದರು, ನಂತರ ಅಡಮಾನವಿಟ್ಟಿರುವ ಚಿನ್ನಾಭರಣಗಳು ಒಂದು ವರ್ಷ ದಾಟಿದ ಹಿನ್ನಲೆಯಲ್ಲಿ ಅದನ್ನು ನವೀಕರಣ ಮಾಡುವುದಕ್ಕೆ ಕಡಬದ ಕೆನರಾ ಬ್ಯಾಂಕ್ ಶಾಖೆಗೆ ನಾನು ತೆರಳಿದ ಸಂದರ್ಭ ಅಡವಿಟ್ಟಿದ್ದ ಚಿನ್ನದಲ್ಲಿ ಕಿವಿಯೋಲೆಯೊಂದು ನಾಪತ್ತೆಯಾಗಿರುವ ವಿಚಾರ ಅವರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಬ್ಯಾಂಕಿನಲ್ಲಿ ಮತ್ತು ಹಿರಿಯ ಅಧಿಕಾರಿಯವರಿಗೆ ತಿಳಿಸಿದ್ದರೂ ಪ್ರಯೋಜನವಾಗದ ಹಿನ್ನಲೆಯಲ್ಲಿ, ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಎಚ್ಚೆತ್ತುಕೊಂಡ ಬ್ಯಾಂಕಿನವರು ಚಿನ್ನ ಇದೆ ಎಂದು ಸಮಾಜಾಯಿಷಿ ನೀಡಿ ಕಿವಿಯೋಲೆಯನ್ನು ವಾಪಸು ನೀಡಿದ್ದಾರೆ.

Advertisement
Click to comment

You must be logged in to post a comment Login

Leave a Reply