Connect with us

MANGALORE

ದಕ್ಷಿಣ ಕನ್ನಡದಲ್ಲಿ 147 ಜನಕ್ಕೆ ಡೆಡ್ಲಿ ವೈರಸ್

ಮಂಗಳೂರು ಜುಲೈ 05: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಇಂದು ಬರೋಬ್ಬರಿ 147 ಮಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು, ಕೊರೊನಾ ಹಾಟ್ ಸ್ಪಾಟ್ ಆಗಿರುವ ಉಳ್ಳಾಲ ರಾಂಡಮ್ ಟೆಸ್ಟ್ ನ 48 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ.


ಇಂದು ಪತ್ತೆಯಾದ ಪ್ರಕರಣಗಳಲ್ಲಿ ಕೊರೊನಾ ರೋಗಿಯ ಪ್ರಾಥಮಿಕ ಸಂಪರ್ಕದಿಂದ 35 ಜನರಿಗೆ ಸೋಂಕು, ಅಂತರಾಷ್ಟ್ರೀಯ ಪ್ರಯಾಣದಿಂದ 8 ಮಂದಿಗೆ ಪಾಸಿಟಿವ್ ,ಹೊರ ಜಿಲ್ಲೆಯಿಂದ ಬಂದ 7 ಮಂದಿ ಗೆ ಕೊರೊನಾ ಸೊಂಕು ತಗುಲಿದ್ದು, ಇಂದಿನ ಪ್ರಕರಣಗಳಲ್ಲಿ ILI – 40‌ ಹಾಗೂ 2 SARI ಪ್ರಕರಣ ಸೇರಿದೆ.


ಇಂದು ಪತ್ತೆಯಾದ ಪ್ರಕರಣಗಳಲ್ಲಿ ಕೋವಿಡ್ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಮಲೇಷಿಯಾದಿಂದ ಹಡಗಿನಲ್ಲಿ ಬಂದ ಇಬ್ಬರಿಗೆ ಸೋಂಕು‌ ದೃಢ ಪಟ್ಟಿದೆ. ಸಂಪರ್ಕವೇ ಪತ್ತೆಯಾಗದ ಓರ್ವ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇನ್ನು ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರಿಗೆ ಕೊರೊನಾ ಸೊಂಕು ದೃಢಪಟ್ಟಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Facebook Comments

comments