Connect with us

    LATEST NEWS

    ಆಟಿದ ಕೂಟ ಕಾರ್ಯಕ್ರಮದಲ್ಲಿ ದೈವ ಆವಾಹನೆ ರೀತಿ ನೃತ್ಯದ ವಿಡಿಯೋ ವೈರಲ್ – ಭಾರೀ ಆಕ್ರೋಶ

    ಮಂಗಳೂರು ಅಗಸ್ಚ್ 14: ಆಟಿ ದಿನ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ದೈವ ಆವಾಹನೆ ರೀತಿಯಲ್ಲಿ ನೃತ್ಯ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಮಂಗಳೂರಿನಲ್ಲಿ ಖಾಸಗಿ ಸಭಾಂಗಣದಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ‘ವಾ ಪೊರ್ಲುಯಾ’ ಹಾಡನ್ನು ಹಾಡಿದ್ದು, ಈ ಸಂದರ್ಭದಲ್ಲಿ ಮಹಿಳೆ ತಾಳಕ್ಕೆ ತಕ್ಕಂತೆ ದೈವದ ಕುಣಿತದ ಮಾದರಿಯನ್ನು ಪ್ರದರ್ಶನ ಮಾಡಿದ್ದಾರೆ. ಮಹಿಳೆ ದೈವ ಪಾತ್ರಧಾರಿಯ ರೀತಿ ಕುಣಿದಿರುವ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಪರ- ವಿರೋಧ ಅಭಿಪ್ರಾಯ ಕೇಳಿಬಂದಿದೆ.

    ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೈವ ನರ್ತನಕ್ಕೆ ಅಪಚಾರ ಎಸಗಿದವರು ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.

     

    ನಾಗದರ್ಶನ ವೇಳೆ ನಟಿ ಜ್ಯೋತಿ ಮೇಲೆ ದೇವರ ಆವಾಹನೆ

    Share Information
    Advertisement
    Click to comment

    You must be logged in to post a comment Login

    Leave a Reply