JYOTHISHYA
ದಿನ ಭವಿಷ್ಯ ಮಂಗಳವಾರ| ಆಗಸ್ಟ್ 4, 2020
ಶ್ರೀ ಗಜೇಂದ್ರ ಜೋಷಿ, ಜಾತಕ ವಿಮರ್ಷಕರು ಮತ್ತು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಆರಾಧಕರು
ಫಲ 4/08/2020, ಮಂಗಳವಾರ
ಮೇಷ:
ರೈತರಿಗೆ ಉತ್ಸಾಹದಾಯಕ ವಾತಾವರಣವು ಸಂತಸ ತರಲಿದೆ. ಬಂಧುಗಳಿಗೆ ಶುಭಸುದ್ದಿ ತಂದೀತು. ಉದ್ಯೋಗಿಗಳಿಗೆ ಸ್ಥಾನಪಲ್ಲಟದ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸರಸದ ದಿನಗಳಿವು ಆರೋಗ್ಯ ವೃದ್ಧಿ.
ವೃಷಭ:
ಗೃಹದಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ನಡೆಯಲಿದೆ. ನಾನಾ ರೀತಿಯಲ್ಲಿ ಧನ ಸಂಪಾದನೆ ಆಗಲಿದೆ. ಗೃಹ ನಿರ್ಮಾಣ ಕಾರ್ಯಗಳಿಗಾಗಿ ಧನವ್ಯಯವಿದೆ. ಕರ್ತವ್ಯದ ಕಾರ್ಯಕರ್ಮದಲ್ಲಿ ವಿಘ್ನಗಳು ತೋರಿಬಂದಾವು.
ಮಿಥುನ:
ಪೂರ್ವಾಪರ ವಿಮರ್ಶಿಸಿ ಮುನ್ನಡೆದರೆ ಉತ್ತಮ. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿ ವರ್ಗದವ ರೊಂದಿಗೆ ಭಿನ್ನಾಭಿಪ್ರಾಯ ಬಂದೀತು. ಸಾಂಸಾರಿಕವಾಗಿ ತಾಪತ್ರಯ ಗಳು ನಿವಾರಣೆಯಾದೀತು. ನಿಮ್ಮ ಪ್ರಯತ್ನ ಸಫಲವಾಗಲಿದೆ.
ಕಟಕ:
ಸಾಂಸಾರಿಕವಾಗಿ ಇಷ್ಟಾರ್ಥ ಸಿದ್ಧಿಸಲಿದೆ ಸಾಂಸಾರಿಕವಾಗಿ ಹೆಚ್ಚಲಿದೆ. ಅದರಂತೆ ಖರ್ಚುಗಳೂ ಬರಲಿವೆ. ಗೃಹಕೃತ್ಯದಲ್ಲಿ ಇಷ್ಟಾರ್ಥ ಸಿದ್ಧಿಸಲಿದೆ. ವ್ಯಾಪಾರೋದ್ಯಮಿಗಳಿಗೆ ಲಾಭದಾಯಕ ಆದಾಯವಿರುತ್ತದೆ.
ಸಿಂಹ:
ವ್ಯಾಪಾರಿಗಳು ತಮ್ಮ ಆದಾಯವನ್ನು ವೃದ್ಧಿಸ ಲಿದ್ದಾರೆ. ಬಂಧುಮಿತ್ರರ ಸಹಕಾರ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಅನಾವಶ್ಯಕ ತಪ್ಪು ಅಭಿಪ್ರಾಯ ಬಂದೀತು. ಹಿರಿಯರ ಹಾಗೂ ಅಧಿಕಾರಿ ವರ್ಗದವರ ಸಹಕಾರವಿದೆ.
ಕನ್ಯಾ :
ಅಸಾಧ್ಯ ಸಂಗತಿಗಳು ಕೂಡ ಸುಲಭದಲ್ಲಿ ನಡೆದು ಹೋದಾವು. ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳು ತೋರಿಬಂದರೂ ಸಾಕಷ್ಟು ವಿಸ್ತಾರಗೊಳ್ಳಲಿದೆ. ಕೋರ್ಟು ಕಚೇರಿ ಕಾರ್ಯದಲ್ಲಿ ಯಶಸ್ಸಿದೆ.
ತುಲಾ :
ವ್ಯಾಜ್ಯ ತಕರಾರುಗಳಿಂದ ಬವಣೆಗಳು ಕಂಡು ಬಂದಾವು. ವ್ಯರ್ಥ ಸಂಚಾರದಿಂದ ಧನವ್ಯಯ ಅನುಭವಕ್ಕೆ ಬರಲಿದೆ. ನೀಚ ಜನರ ಸಹವಾಸದಿಂದ ಅವಮಾನ, ಧನಹಾನಿ ಸಂಭವಿಸೀತು. ಜಾಗ್ರತೆ ಮಾಡುವುದು.
ವೃಶ್ಚಿಕ :
ಪತ್ನಿಯ ಚಾಣಾಕ್ಷತೆ ಹಾಗೂ ದಿಟ್ಟತನದಿಂದ ಕುಟುಂಬದಲ್ಲಿ ಪ್ರಶಾಂತ ವಾತಾವರಣ ಅನುಭವಿಸ ಲಿದ್ದೀರಿ. ದಾಯಾದಿಗಳ ಬಗ್ಗೆ ಹಾಗೂ ಹಿತಶತ್ರುಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ನಿಮ್ಮೆಣಿಕೆಯಂತೆ ಗುರಿ ಸಾಧಿಸುವಿರಿ.
ಧನಸ್ಸು:
ಶನಿಚಾರದಿಂದ ನಾನಾರೀತಿಯಲ್ಲಿ ಹಲವು ತರದ ಕಿರಿಕಿರಿಯನ್ನು ಅನುಭವಿಸುವಂತಾದೀತು. ಆಗಾಗ ವಿಳಂಬ ಗತಿಯಲ್ಲಿ ಕೆಲಸ ಕಾರ್ಯಗಳು ನಡೆದರೂ ನಿಮ್ಮ ಕಾರ್ಯದಲ್ಲಿ ಜಯ ದೊರಕಲಿದೆ. ಚಿಂತಿಸದಿರಿ.
ಮಕರ:
ಬಂಧುಮಿತ್ರರ ಸಹಕಾರದಿಂದ ಮನೋ ನೆಮ್ಮದಿಯ ಅನುಭವವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಹೆಜ್ಜೆ ಹೆಜ್ಜೆಗೂ ಪರೀಕ್ಷೆಗೆ ಗುರಿಯಾಗಲಿದ್ದೀರಿ. ಹಿತಾಸಕ್ತಿಗಳ ವಿರುದ್ಧ ಪ್ರತಿಭಟನೆ ತೋರಿಬರಲಿದೆ. ದಿನಾಂತ್ಯ ಶುಭವಿದೆ.
ಕುಂಭ:
ನಿಮ್ಮ ವಿರೋಧಿಗಳ ಕುಕೃತ್ಯ ನಿಮ್ಮ ಮೇಲೆ ಹೆಚ್ಚಿನ ಪರಿಣಾಮ ಬೀರದು. ಸಾಮಾಜಿಕವಾಗಿ ಕೀರ್ತಿ ಪ್ರತಿಷ್ಠೆ ಹೆಚ್ಚಲಿದೆ. ಭಾಗಿತ್ವದ ವ್ಯವಹಾರದಲ್ಲಿ ಲಾಭದಾಯಕ ಆದಾಯವು ಹೆಚ್ಚಲಿದೆ. ಆರೋಗ್ಯ ಜಾಗ್ರತೆ.
ಮೀನ:
ವೃತ್ತಿರಂಗದಲ್ಲಿ ಅವ್ಯವಸ್ಥೆಗಳ ಮೇಲೆ ಹತೊಟಿ ಸಾಧಿಸಲಿದ್ದೀರಿ. ಸ್ನೇಹಿತರ ಸಹಕಾರ ತೋರಿಬಂದರೂ ಸಲುಗೆಯ ದುರುಪಯೋಗವಾಗದಂತೆ ಜಾಗ್ರತೆ ಮಾಡಿರಿ. ಗೃಹದಲ್ಲಿ ಮಂಗಲಕಾರ್ಯದ ಸಂತಸವಿರುತ್ತದೆ