Connect with us

    LATEST NEWS

    ಕಾಪು ಫಕೀರ್ನಕಟ್ಟೆ ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟ – ಇಬ್ಬರು ಸಜೀವ ದಹನ

    ಕಾಪು ಮಾರ್ಚ್ 21: ಕಾಪುವಿನ ಫಕೀರ್ನಕಟ್ಟೆಯ ಗುಜರಿ ಅಂಗಡಿಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಬೆಂಕಿಗೆ ಇಬ್ಬರು ಸಜೀವ ದಹನವಾಗಿರುವ ಘಟನೆ ನಡೆದಿದೆ.


    ಮೃತರನ್ನು ರಜಾಕ್ ಮಲ್ಲಾರ್, ರಜಬ್ ಚಂದ್ರನಗರ ಎಂದು ಗುರುತಿಸಲಾಗಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಮಲ್ಲಾರು ದಾಬ ನಿವಾಸ ಬಳಿಯ ಗುಜರಿ ಅಂಗಡಿಯೊಳಗೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಅನಾಹುತ ಉಂಟಾಗಿದೆ. ಗುಜರಿಯಲ್ಲಿಡಲಾಗಿದ್ದು ಹಳೆಯ ವಸ್ತುಗಳಿಗೆ ಬೆಂಕಿ ಹತ್ತಿಕೊಂಡಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ. ಉಡುಪಿ ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply