LATEST NEWS
ಮೇಕುನ ಚಂಡಮಾರುತ ಪರಿಣಾಮ ಕರಾವಳಿಯಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುವ ಎಚ್ಚರಿಕೆ

ಮೇಕುನ ಚಂಡಮಾರುತ ಪರಿಣಾಮ ಕರಾವಳಿಯಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುವ ಎಚ್ಚರಿಕೆ
ಮಂಗಳೂರು ಮೇ 23: ಅರಬ್ಬೀ ಸಮುದ್ರದ ನೈಋುತ್ಯ ಭಾಗದಲ್ಲಿ ಮೇ 22 ರ ಸಂಜೆ 2ನೇ ಮೇಕುನು ಚಂಡ ಮಾರುತ ಸೃಷ್ಠಿಯಾಗಿದ್ದು ದಕ್ಷಿಣಕನ್ನಡ, ಉಡುಪಿ ಉತ್ತರ ಕನ್ನಡ ಸೇರಿ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳ ಮೇಲೆ ಪ್ರಭಾವ ಬೀರುವ ಮುನ್ಸೂಚನೆ ಇದೆ.
ಮೇ 23 ರಿಂದ ಮೇ 25 ರ ವರೆಗೆ ಕರಾವಳಿ , ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗಾಳಿ ಮಳೆಯಬ್ಬರದ ಎಚ್ಚರಿಕೆಯನ್ನು ಹವಮಾನ ಇಲಾಖೆ ನೀಡಿದೆ. ಈ ಚಂಡ ಮಾರುತ ಮೇ 26 ಬೆಳಿಗ್ಗೆ ಓಮನ್ ಮತ್ತು ಯೆಮನ್ ಕರಾವಳಿಗೆ ಅಪ್ಪಳಿಸಿದೆ.

ಸೋಮವಾರದಿಂದಲೇ ರಾಜ್ಯದೆಲ್ಲಡೆ ಮುಂಗಾರು ಪೂರ್ವ ಮಳೆ ಚುರುಕಾಗಿದೆ. ಕರಾವಳಿ ಜಿಲ್ಲೆ ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಮೇ 25 ರವರೆಗೂ ಭಾರಿ ಮಳೆ ನಿರೀಕ್ಷಿಸಲಾಗಿದೆ.
ಮೀನುಗಾರರಿಗೆ ಎಚ್ಚರಿಕೆ
ಮೇಕುನು ಚಂಡಮಾರುತ ಮೇ 23 ಮತ್ತು 24 ರಂದು ತೀವ್ರತೆ ಪಡೆಯಲಿದೆ. ಗಂಟೆಗೆ 150-170 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಸಹಿತ ಓವನ್ ಕರಾವಳಿಗೆ ಅಪ್ಪಳಿಸಲಿದೆ. ಈ ಹಿನ್ನಲೆಯಲ್ಲಿ ಮೇ 23 ರಿಂದ 26 ರವರೆಗೆ ಅರಬ್ಬಿ ಸಮುದ್ರಕ್ಕೆ ಇಳಿಯದಂತೆ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.