LATEST NEWS
ಸೈಬರ್ ಕ್ರೈಂ – ಕೆನರಾ ಬ್ಯಾಂಕ್ ಕೆವೈಸಿ ಅಪ್ಡೇಟ್ ಅಂತ ಹೇಳಿ ವ್ಯಕ್ತಿಯ ಅಕೌಂಟ್ ನಿಂದ 50 ಸಾವಿರ ಹಣ ಎಗರಿಸಿದ ವಂಚಕರು
ಹೆಬ್ರಿ ನವೆಂಬರ್ 09: ಕರಾವಳಿಯಲ್ಲಿ ಸೈಬರ್ ವಂಚನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲಿ ಮೋಸ ಹೋಗುವವರು ಜಾಸ್ತಿಯಾಗುತ್ತಾ ಇದ್ದಾರೆ. ಈ ನಡು ಕೆನರಾ ಬ್ಯಾಂಕ್ ಕೆವೈಸಿ ಅಪ್ಡೇಟ್ ಹೆಸರಲ್ಲಿ ಅಪರಿಚಿತರು ಹಣ ವಂಚನೆ ಮಾಡಿರುವ ಆರೋಪದಲ್ಲಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿಯ ಶೇಖರ ಎಂಬುವವರ ಮೊಬೈಲಿಗೆ ಕೆವೈಸಿ ಅಪ್‌ಲೋಡ್ ಎಂಬ ಎಸ್‌ಎಂಎಸ್ ಬಂದಿದ್ದು ಅದರಂತೆ ಎಸ್‌ಎಂಎಸ್‌ನಲ್ಲಿದ್ದ ಸಂಖ್ಯೆಗೆ ಕರೆ ಮಾಡಿದಾಗ ಕೆನರಾ ಬ್ಯಾಂಕಿನವರು ಎಂದು ಹೇಳಿ ನಿಮ್ಮ ಕೆವೈಸಿ ಅಪ್‌ಡೇಟ್ ಆಗದೆ ಇದ್ದು ಅಕೌಂಟ್ ಬ್ಲಾಕ್ ಮಾಡುವುದಾಗಿ ಹೇಳಿದ್ದಾರೆ. ಸಿನಿಮಾ ಈ ಸಂದರ್ಭದಲ್ಲಿ ಶೇಖರ್ ಅವರು ಬ್ಯಾಂಕ್ ಖಾತೆ ಸಂಖ್ಯೆ, ಹೆಸರು ವಿಳಾಸ ಹಾಗೂ ಎಟಿಎಂ ಕಾರ್ಡ್ ಕೊನೆಯ ನಾಲ್ಕು ಸಂಖ್ಯೆಯನ್ನು ಕೊಟ್ಟಿದ್ದಾರೆ. ಮಾಹಿತಿ ಅಪ್‌ಲೋಡ್ ಆದ ನಂತರ ಒಟಿಪಿ ಬರುವುದಾಗಿ ತಿಳಿಸಿ ನಂತರ ಸ್ವಲ್ಪ ಸಮಯದಲ್ಲಿ ಕರೆ ಮಾಡಿ ಒಟಿಪಿ ಕೇಳಿ ಪಡೆದುಕೊಂಡಿದ್ದಾರೆ.
ಬಳಿಕ 15 ನಿಮಿಷಗಳ ನಂತರ ಮತ್ತೆ ಕರೆ ಮಾಡಿ ಕನ್ನಡ ಭಾಷೆಯಲ್ಲಿ ಮಹಿಳೆಯೊಬ್ಬರು ಮಾತನಾಡಿ ಕೆನರಾ ಬ್ಯಾಂಕಿನಿಂದ ಮಾತನಾಡುತ್ತಿರುವುದಾಗಿ ತಿಳಿಸಿ ನಿಮ್ಮ ಖಾತೆಯಿಂದ ₹51,908 ಕಡಿತವಾಗಿದ್ದು, ನೀವು 1930 ಕರೆ ಮಾಡಿ ಎಂದು ತಿಳಿಸಿದ್ದಾರೆ. ಇದೇ ಹೊತ್ತಿಗೆ ಗಲಿಬಿಲಿಗೊಂಡ ಶೇಖರ್ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಖಾತೆಯಿಂದ 51908 ಕಡಿತಗೊಂಡಿರುವುದು ತಿಳಿದು ಬಂದಿದೆ.
You must be logged in to post a comment Login