LATEST NEWS
ತಿರುಪತಿ ಪ್ರಸಾದ ಲಡ್ಡು ನಲ್ಲಿ ಹಂದಿ, ದನದ ಕೊಬ್ಬು ಬಳಕೆ
ತಿರುಪತಿ ಸೆಪ್ಚೆಂಬರ್ 19: ತಿರುಪತಿ ದೇವಸ್ಥಾನದಲ್ಲಿ ನೀಡು ಲಡ್ಡು ಪ್ರಸಾದದಲ್ಲಿ ಹಂದಿ ಮತ್ತು ದನದ ಕೊಬ್ಬು ಬಳಕೆ ಮಾಡಿರುವುದು ಲಾಬ್ ರಿಪೋರ್ಟ್ ನಿಂದ ದೃಢಪಟ್ಟಿದೆ ಎಂದು ಆಡಳಿತರೂಢ ಟಿಡಿಪಿ ಆರೋಪಿಸಿದೆ. ಸ್ವತಃ ಆಂಧ್ರ ಪ್ರದೇಶ ಮುಖ್ಯಮಂತ್ರಿ ಆರೋಪಿಸಿದ ಬೆನ್ನಲ್ಲೇ, ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ.
ತಿರುಪತಿ ಲಡ್ಡುವಿನಲ್ಲಿ ಹಂದಿ, ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದನ್ನು ಗುಜರಾತ್ ಮೂಲದ ಜಾನುವಾರು ಪ್ರಯೋಗಾಲಯ, NDDB CALF Ltd ದೃಢಪಡಿಸಿದೆ ಎಂದು ಆಡಳಿತಾರೂಢ ತೆಲುಗು ದೇಶಂ ಪಕ್ಷ(ಟಿಡಿಪಿ) ಹೇಳಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಯೋಗಾಲಯದ ವರದಿಯನ್ನು ಪ್ರದರ್ಶಿಸಿದ ಟಿಡಿಪಿ ವಕ್ತಾರ ಆನಂ ವೆಂಕಟ ರಮಣ ರೆಡ್ಡಿ ಅವರು, ತಿರುಪತಿಯ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು ಇರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ. ಇದರಲ್ಲಿ ಹಂದಿಯ ಕೊಬ್ಬು, ದನದ ಕೊಬ್ಬು, ಪಾಮಾಯಿಲ್, ಸೋಯಾಬಿನ್, ಸೂರ್ಯಕಾಂತಿ ಎಣ್ಣೆ, ಮೆಕ್ಕೆ ಜೋಳ ಎಣ್ಣೆ ಬೆರೆಸಿದ ಕಡಿಮೆ ಗುಣಮಟ್ಟದ ತುಪ್ಪ ಬಳಕೆ ಮಾಡಲಾಗುತ್ತಿದೆ ಎಂದು ಖಚಿತವಾಗಿದೆ ಎಂದರು.