DAKSHINA KANNADA
‘ಜಾತಿವಾದಿ ಮುನಿರತ್ನರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ’, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ಘಟಕ ಆಗ್ರಹ
ಮಂಗಳೂರು : ‘ಜಾತಿವಾದಿ ಮುನಿರತ್ನರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ಘಟಕ ಆಗ್ರಹಿಸಿದೆ.
ಬೆಂಗಳೂರು ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕನಾಗಿರುವ ಮುನಿರತ್ನ, ಪರಿಶಿಷ್ಟ ಜಾತಿಯ ಬಗ್ಗೆ ನಿಂದನಾತ್ಮಕ ಪದವನ್ನು ಬಳಸಿದ್ದಲ್ಲದೇ, ಮಹಿಳೆಯರ ಬಗ್ಗೆ ಅವ್ಯಾಚ್ಯ ಶಬ್ದದಿಂದ ನಿಂದಿಸಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರಿಂದ, ರಾಜ್ಯದ ಅಪಾರ ದಲಿತರ ಮತ್ತು ಮಹಿಳೆಯರ ಮನಸ್ಸಿಗೆ ಅತೀವ ನೋವು ಉಂಟಾಗಿದ್ದು, ದೇಶ ಸ್ವಾತಂತ್ರ್ಯ ಕಂಡು 75 ವರ್ಷ ಕಳೆದರೂ ದೇಶದಲ್ಲಾಗುತ್ತಿರುವ ಮಹಿಳೆಯರ ಮತ್ತು ದಲಿತರ ಮೇಲಿನ ದೌರ್ಜನ್ಯದ ಪ್ರತೀಕವಾಗಿ ಮತ್ತು ಸಂವಿಧಾನದ ಪಾಲನೆಗಾಗಿ ಆಯ್ಕೆಯಾದ ಶಾಸಕರೇ ತನ್ನ ಲಜ್ಜೆಗೆಟ್ಟ ಜಾತಿವಾದಿ, ಮನುವಾದಿ ಪಾಲಕರಾಗಿ ಸಂವಿಧಾನ ವಿರೋಧಿಯಾಗಿ ರಾಜ್ಯವೇ ನಾಚಿಕೆ ಪಡುವಂತೆ ನಡೆದುಕೊಂಡ ಬಿಜೆಪಿ ಶಾಸಕ ಮುನಿರತ್ನರ ನೀಚ ಬುದ್ಧಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಇಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕದ ವತಿಯಿಂದ ಜಿಲ್ಲಾಧ್ಯಕ್ಷರಾದ ದಿನೇಶ್ ಮೂಳೂರು ರವರ ನೇತೃತ್ವದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ರವರಲ್ಲಿ ದೂರು ನೀಡಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯೆ ಅಪ್ಪಿ ಎಸ್, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಟಿ.ಹೊನ್ನಯ್ಯ, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಪ್ರೇಮ್ ನಾಥ್ ಪಿ.ಬಿ ಬಳ್ಳಾಲ್ ಬಾಗ್, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಘಟಕದ ಜಿಲ್ಲಾಧ್ಯಕ್ಷರಾದ ಜಯಕುಮಾರ್, ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಗಣೇಶ್ ಪ್ರಸಾದ್, ಕಾಂಗ್ರೆಸ್ ನಾಯಕರಾದ ಪ್ರಕಾಶ್ ಕೋಡಿಕಲ್, ಇಂದಿರಾ ನಾಗೇಶ್, ಗುರುಪ್ರಸಾದ್ ಮೂಳೂರು, ಅಭಿಷೇಕ್, ಬಾಬು ಅಳಿಯೂರು ಮತ್ತು ಇತರರು ಉಪಸ್ಥಿತಿರಿದ್ದರು.
You must be logged in to post a comment Login