DAKSHINA KANNADA
ತೃಪ್ತಿ ಹಾಲು ವಿತರಣೆಯಿಂದ ಜಂಬೋ ಪ್ಯಾಕೆಟ್ ಗ್ರಾಹಕರು ಅತೃಪ್ತ

ತೃಪ್ತಿ ಹಾಲು ವಿತರಣೆಯಿಂದ ಜಂಬೋ ಪ್ಯಾಕೆಟ್ ಗ್ರಾಹಕರು ಅತೃಪ್ತ
ಮಂಗಳೂರು, ಜುಲೈ 12 : ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜುಲೈ 12 ರಂದು ಕೆ.ಎಂ.ಎಫ್ ನಂದಿನ ಹಾಲಿನ ಪ್ಯಾಕೆಟ್ ಜೊತೆ ವಿತರಿಸಿದ ತೃಪ್ತಿ ಹಾಲಿನ ವಿಚಾರದಲ್ಲಿ ನಿತ್ಯ ಗ್ರಾಹಕರಲ್ಲಿ ಅತೃಪ್ತಿ ಕಾಡಿದೆ.
ಜುಲೈ 12 ರಂದು ಎರಡೂ ಜಿಲ್ಲೆಗಳಲ್ಲಿ ತನ್ನ ಹೊಸ ಪ್ರಾಡೆಕ್ಟ್ ಆದ ತೃಪ್ತಿ ಹಾಲಿನ 180 ಮಿ.ಲೀಟರ್ ನ ಪ್ಯಾಕೆಟ್ಟನ್ನು ಉಚಿತವಾಗಿ ವಿತರಿಸಿತ್ತು.

ಕೆ.ಎಂ.ಎಫ್ ಪ್ರತಿ ಅರ್ಧ ಲೀಟರ್ ಹಾಲಿನ ಜೊತೆಗೆ ತೃಪ್ತಿ ಹಾಲನ್ನು ನೀಡಲು ನಿರ್ಧರಿಸಿತ್ತು.
ಆದರೆ ಈ ಆಫರ್ ಒಂದು ಲೀಟರ್ ಪ್ಯಾಕೆಟ್ ಹಾಗೂ ಜಂಬೋ ಪ್ಯಾಕೆಟ್ ಖರೀದಿಸುವ ಗ್ರಾಹಕರಿಗೆ ಅನ್ಯಾಯ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಒಂದು ಲೀಟರ್ ಹಾಗೂ 6 ಲೀಟರ್ ನ ಜಂಬೋ ಪ್ಯಾಕೆಟ್ ಖರೀದಿಸುವ ಗ್ರಾಹಕರಿಗೆ ಒಂದು ಲೀಟರ್ ಗೆ ಎರಡು ಪ್ಯಾಕೆಟುಗಳಂತೆ ಹಾಗೂ ಜಂಬೋ ಪ್ಯಾಕೆಟ್ ಖರೀದಿಸುವವರಿಗೆ 12 ಪ್ಯಾಕೆಟ್ ತೃಪ್ತಿ ಹಾಲನ್ನು ನೀಡಬೇಕಾಗಿತ್ತು.
ಆದರೆ ವಿತರಕರು ಮಾತ್ರ ಕೇವಲ ಒಂದು ಪ್ಯಾಕೆಟ್ ನೀಡಿದ್ದಾರೆ.
ಇದರಿಂದ ಜಂಬೋ ಪ್ಯಾಕೆಟ್ ಹಾಲು ಖರೀದಿಸುವ ಮಂದಿ ಆಕ್ರೋಶಿತರಾಗಿದ್ದಾರೆ.
ತಮಗೂ ಅರ್ಧ ಲೀಟರ್ ಪ್ಯಾಕೆಟ್ ಲೆಕ್ಕಚಾರದಂತೆಯೇ ತೃಪ್ತಿ ಹಾಲಿನ ಪ್ಯಾಕೆಟ್ ನೀಡಬೇಕೆಂಬ ಒತ್ತಡವನ್ನೂ ಕೆ.ಎಂ.ಎಫ್ ಹಾಲು ವಿತರಕರ ಮೂಲಕ ಅಧಿಕಾರಿಗಳಿಗೆ ಹಾಕಿದ್ದಾರೆ.
ಈ ವಿಚಾರವನ್ನು ಈಗಾಗಲೇ ಜಂಬೋ ಹಾಲಿನ ಪ್ಯಾಕೆಟ್ ಖರೀದಿಸುವ ಗ್ರಾಹಕರು ಅಧಿಕಾರಿಗಳ ಗಮನಕ್ಕೂ ತಂದಿದ್ದು, ತಮ್ಮ ಪ್ರಮಾದಕ್ಕೆ ಅಧಿಕಾರಿಗಳು ಕ್ಷಮೆಯನ್ನೂ ಕೋರಿದ್ದಾರೆ.
ಸಾರ್ವಜನಿಕವಾಗಿ ಇಂಥ ಆಫರ್ ಗಳನ್ನು ನೀಡುವ ಮೊದಲು ಅದರ ಸಾಧ್ಯಾಸಾಧ್ಯತೆಯ ಬಗ್ಗೆ ಯೋಜನೆ ಹಾಕಿಕೊಂಡಿದ್ದರೆ , ಇಂಥಹ ಪ್ರಮಾದ ಆಗುತ್ತಿರಲಿಲ್ಲ ಎನ್ನುವ ಅಭಿಪ್ರಾಯಗಳೂ ಕೇಳಿ ಬಂದಿದೆ.