Connect with us

DAKSHINA KANNADA

ಡಿಕೆ ಶಿವಕುಮಾರ್ ರವರ ಸಾಕ್ಷಿ ದಾಖಲಾತಿ ಸಂದರ್ಭ ಕೈಕೊಟ್ಟ ಕರೆಂಟ್

ಪುತ್ತೂರು ಅಕ್ಟೋಬರ್ 05: ವಿದ್ಯುತ್ ಸಮಸ್ಯೆ ಬಗ್ಗೆ ವ್ಯಕ್ತಿಯಿಂದ ಅವ್ಯಾಚ್ಯ ಶಬ್ದಗಳ ಪ್ರಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಾಕ್ಷಿ ದಾಖಲಿಸಿಕೊಳ್ಳುತ್ತಿರುವ ಸಂದರ್ಭ ಸುಳ್ಯ ನ್ಯಾಯಾಲಯದಲ್ಲಿ ವಿದ್ಯುತ್ ಕೈಕೊಟ್ಟ ಘಟನೆ ನಡೆದಿದೆ.


2016 ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಸುಳ್ಯದ ಬೆಳ್ಳಾರೆಯ ಸಾಯಿ ಗಿರಿಧರ್ ಎಂಬ ವ್ಯಕ್ತಿ ಅಂದಿನ ಇಂಧನ ಸಚಿವರಾಗಿದ್ದ ಡಿಕೆಶಿಗೆ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡಿದ್ದರು, ಈ ಹಿನ್ನಲೆ ಡಿಕೆಶಿ ಅಧಿಕಾರಿಗಳ ಮೂಲಕ ಸಾಯಿ ಗಿರಿಧರ್ ವಿರುದ್ಧ ದೂರು ದಾಖಲಿಸಿದ್ದರು, ಈ ಪ್ರಕರಣ ವಿಚಾರಣೆಗೆ ಇಂದು ಸಾಕ್ಷಿ ಹೇಳಲು ಡಿಕೆಶಿಯವರು ಆಗಮಿಸಿದ್ದರು.


ನ್ಯಾಯಾಲಯದಲ್ಲಿ ಡಿಕೆ ಶಿವಕುಮಾರ್ ಪ್ರಕರಣದ ಕುರಿತಂತೆ ಸಾಕ್ಷಿ ಹೇಳುತ್ತಿರುವಾಗ ಕರೆಂಟ್ ಹೋಗಿದ್ದು, ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರೂ ಸುಳ್ಯದಲ್ಲಿನ ವಿದ್ಯುತ್ ಸಮಸ್ಯೆಯ ಬಗ್ಗೆ ಡಿಕೆಶಿಗೆ ಮನವರಿಕೆ ಮಾಡಿದ್ದಾರೆ. ಸುಳ್ಯದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು, ಎಲ್ಲರೂ ಪ್ರತೀ ದಿನ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ನಿಮಗೂ ಇಂದು ವಿದ್ಯುತ್ ನ ಸಮಸ್ಯೆಯ ಅರಿವಾಗಿದೆ ಎಂದು ಮಾಜಿ ಇಂಧನ ಸಚಿವ ಡಿಕೆಶಿಗೆ ನ್ಯಾಯಾಧೀಶರು ಮಾಹಿತಿ ನೀಡಿದರು.

Advertisement
Click to comment

You must be logged in to post a comment Login

Leave a Reply