LATEST NEWS
ಮಂಗಳೂರಿನಲ್ಲಿ ನಾಳೆ ಬೆಳಿಗ್ಗೆ 6 ರವರೆಗೆ ಕರ್ಪ್ಯೂ

ಮಂಗಳೂರಿನಲ್ಲಿ ನಾಳೆ ಬೆಳಿಗ್ಗೆ 6 ರವರೆಗೆ ಕರ್ಪ್ಯೂ
ಮಂಗಳೂರು ಡಿಸೆಂಬರ್ 22: ಮಂಗಳೂರು ನಗರದಾದ್ಯಂತ ಮತ್ತೆ ಕರ್ಪ್ಯೂ ಜಾರಿಯಾಗಿದೆ. ಇಂದು ಬೆಳಿಗ್ಗೆ 6 ರಿಂದ ಸಂಜೆ 5 ರ ತನಕ ಕರ್ಪ್ಯೂವನ್ನು ಸಡಿಸಲಾಗಿತ್ತು. ಮತ್ತೆ ಸಂಜೆ 5 ರಿಂದ ನಾಳೆ ಬೆಳಿಗ್ಗೆ 6 ರ ತನಕೆ ನಗರದಾದ್ಯಂತ ಕರ್ಪ್ಯೂ ಜಾರಿಯಲ್ಲಿರುತ್ತದೆ ಎಂದು ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದಾರೆ.
ನಾಳೆ 23 ರಂದು ಬೆಳಿಗ್ಗೆ 6 ರಿಂದ 24 ರ ಬೆಳಿಗ್ಗೆ 6 ರವರೆಗೆ ಸೆಕ್ಷನ್ 144 ಜಾರಿಯಲ್ಲಿದ್ದು, ಡಿಸೆಂಬರ್ 24 ರಂದು ಪರಿಸ್ಥಿತಿ ನೋಡಿ ತೀರ್ಮಾನಿಸಲಾಗುವುದು ಎಂದು ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದಾರೆ.

ಈ ನಡುವೆ ಮತ್ತೆ ಕರ್ಪ್ಯೂ ಜಾರಿಯಾದ ಹಿನ್ನಲೆ ನಗರದ ರಸ್ತೆಗಳು ಖಾಲಿ ಖಾಲಿಯಾಗಿವೆ. ನಗರಕ್ಕೆ ಪ್ರವೇಶಿಸುವ ಎಲ್ಲಾ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದು, ಯಾವುದೇ ವಾಹನಗಳಿಗೆ ಪ್ರವೇಶ ನೀಡಲು ನಿರಾಕರಿಸಿದ್ದಾರೆ.