LATEST NEWS
ಒಂದು ತಲೆಗೆ ಹತ್ತು ತಲೆ ತೆಗೆಯುವ ತಾಕತ್ತು ನಮಗೆ ಇದೆ – ಸಿ.ಟಿ ರವಿ
ಒಂದು ತಲೆಗೆ ಹತ್ತು ತಲೆ ತೆಗೆಯುವ ತಾಕತ್ತು ನಮಗೆ ಇದೆ – ಸಿ.ಟಿ ರವಿ
ಮಂಗಳೂರು ಮಾರ್ಚ್ 6: ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಕೊಲೆಯೊಂದಿಗೆ ಕಾಂಗ್ರೇಸ್ ಪಕ್ಷದ ಪಾಪದ ಕೊಡ ತುಂಬಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವ ಭಾಗ್ಯವೂ ಕೂಡ ಸರಕಾರವನ್ನು ಉಳಿಸಲ್ಲ ಎಂದು ಶಾಸಕ ಸಿ,ಟಿ ರವಿ ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಜನಸುರಕ್ಷಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ಕೊಟ್ಟವರ ಪಟ್ಟಿ ತಯಾರಾಗಿದೆ ಎಂದು ಹೇಳಿದ ಅವರು, ಸಿದ್ಧರಾಮಯ್ಯ ತನ್ನ ಆಡಳಿತದಲ್ಲಿ ಕೋಮುವಾದ ಜಾರಿ ತಂದಿದ್ದಾರೆ ಎಂದು ಕೇವಲ ಒಂದು ಕೋಮಿನ ಜನರನ್ನು ಓಲೈಸಲು ಶಾದಿಭಾಗ್ಯ ತಂದಿದ್ದಾರೆ ಅಲ್ಲದೆ ಟಿಪ್ಪು ಸುಲ್ತಾನ್ ನನ್ನು ವೈಭವೀಕರಿಸುವ ಕೆಲಸ ಸರಕಾರ ಮಾಡಿದೆ ಎಂದು ಆರೋಪಿಸಿದರು, ಒಂದು ವೇಳೆ ಅಫ್ಜಲ್ ಖಾನ್ ಜಯಂತಿ ಮಾಡಿದರೆ ನೀವು ಯಾವ ಸಂತತಿ ಎಂದು ತಿಳಿಯಲು ಡಿಎನ್ ಎ ಪರೀಕ್ಷೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ ಅವರು ಮುಖ್ಯಮಂತ್ರಿಗಳೇ ನೀವು ಆಡುತ್ತಿರುವುದು ನೋಡಿದರೆ ನಿಮ್ಮ ತಂದೆ ನಿಮಗೆ ಸಿದ್ದರಾಮಯ್ಯ ಎಂದು ಹೆಸರಿಡುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.
ಮಠಮಂದಿರ ವಶಕ್ಕೆ ಪಡೆಯಲು ಪ್ರಯತ್ನಿಸಿ ನೀವು ದತ್ತ ಪೀಠದ ಹೆಸರು ಬದಲಾಯಿಸಲು ಹೊರಟಿದ್ದೀರಿ, ತಾಕತ್ತಿದ್ದರೆ ದತ್ತಪೀಠದ ಹೆಸರು ಬದಲಾಯಿಸಿ ನೋಡಿ, ಕಣ್ಣಿಗೆ ಕಣ್ಣು, ತಲೆಗೆ ತಲೆ ಎನ್ನುವ ಹಮ್ಮರಬಿ ಸಿದ್ಧಾಂತ ನಮಗೂ ಗೊತ್ತಿದೆ ಎಂದು ಎಚ್ಚರಿಸಿದರು. ನಮಗೂ ಒಂದು ತಲೆಗೆ ಹತ್ತು ತಲೆ ತೆಗೆಯುವ ತಾಕತ್ತು ಇದೆ, ಆದರೆ ನಾವು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟವರು ಅಂತ ಕೆಲಸ ಮಾಡುವವರು ನಾವಲ್ಲ ಎಂದು ಹೇಳಿದರು.