LATEST NEWS
ಕರೋನಾ ಭೀತಿ ಹಿನ್ನಲೆ ಪ್ರವಾಸಿ ಹಡಗಿಗೆ ಮಂಗಳೂರು ಬಂದರು ಪ್ರವೇಶಕ್ಕೆ ಅನುಮತಿ ನಿರಾಕರಣೆ

ಕರೋನಾ ಭೀತಿ ಹಿನ್ನಲೆ ಪ್ರವಾಸಿ ಹಡಗಿಗೆ ಮಂಗಳೂರು ಬಂದರು ಪ್ರವೇಶಕ್ಕೆ ಅನುಮತಿ ನಿರಾಕರಣೆ
ಮಂಗಳೂರು ಮಾರ್ಚ್ 7: ಅತಿ ಹೆಚ್ಚು ಪ್ರವಾಸಿ ಹಡಗನ್ನು ಬರಮಾಡಿಕೊಳ್ಳುವ ಮಂಗಳೂರು ಬಂದರು ಈ ಬಾರಿ ಕರೋನಾ ಹಿನ್ನಲೆ ಪ್ರವಾಸಿ ಹಡಗಿಗೆ ಮಂಗಳೂರು ಬಂದರು ಪ್ರವೇಶಕ್ಕೆ ಕೊನೆ ಕ್ಷಣದಲ್ಲಿ ಅನುಮತಿ ನಿರಾಕರಿಸಿದೆ.
ವಿಶ್ವಪರ್ಯಟನೆ ಮಾಡುತ್ತಿರುವ ಪ್ರವಾಸಿ ಹಡಗು ಶನಿವಾರ ಮುಂಜಾನೆ 6 ಗಂಟೆಗೆ ಬಂದರು ಪ್ರವೇಶಿಸಬೇಕಿತ್ತು. ಆದರೆ ಹಡಗು ಕರೋನಾ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ್ದರಿಂದ ಸರಕಾರ ಮಂಗಳೂರು ಬಂದರು ಪ್ರವೇಶಕ್ಕೆ ಅನುಮತಿ ನಿರಾಕರಿಸಿದೆ.

ಪ್ರವಾಸಿಗರಲ್ಲಿ ಕರೋನಾ ಬಾಧಿತರು ಯಾರೂ ಇಲ್ಲ ಎಂದು ಹಡಗಿನ ನಿರ್ವಹಣಾ ತಂಡ ಸಮಜಾಯಿಷಿ ನೀಡಿದ್ದರೂ ಸರಕಾರ ಒಪ್ಪಿಗೆ ನೀಡಲು ನಿರಾಕರಿಸಿದೆ.