LATEST NEWS
ಯುಟ್ಯೂಬ್ ಚಾನೆಲ್ ಆರಂಭಿಸಿದ ಒಂದೇ ದಿನಕ್ಕೆ ಸಿಲ್ವರ್ ಗೋಲ್ಡ್ ಮತ್ತು ಡೈಮಂಟ್ ಬಟನ್ ಪಡೆದ ಪುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ

ಪೋರ್ಚುಗಲ್ ಅಗಸ್ಟ್ 23: ಯುಟ್ಯೂಬ್ ಗೆ ತಲೆ ತಿರುಗುವಂತೆ ಮಾಡಿದ ಖ್ಯಾತ ಪುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ. ಯುೂಟ್ಯೂಬ್ ಚಾನೆಲ್ ಆರಂಭಿಸಿದ ಒಂದೇ ದಿನಕ್ಕೆ 2 ಕೋಟಿಗೂ ಅಧಿಕ ಚಂದಾದಾರರನ್ನು ಚಾನಲೆ ಪಡೆದಿದ್ದು, ಸಿಲ್ವರ್ ಗೋಲ್ ಹಾಗೂ ಡೈಮಂಡ್ ಬಟನ್ ಒಟ್ಟಿಗೆ ಸಿಕ್ಕಿದೆ. ಈ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೊ ಯೂಟ್ಯೂಬ್ ನ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಕ್ರಿಸ್ಟಿಯಾನೋ ರೊನಾಲ್ಡೊ ಅವರು ಇದೇ ಮೊದಲ ಬಾರಿಗೆ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಆ ಚಾನೆಲ್ ಕೇವಲ 90 ನಿಮಿಷದಲ್ಲೇ 10 ಲಕ್ಷ ಚಂದಾದಾರರನ್ನು ಹೊಂದುವ ಮೂಲಕ ಅಭಿಮಾನಿಗಳು ರೊಚ್ಚಿಗೇಳುವಂತೆ ಮಾಡಿದೆ. ಅಷ್ಟೇ ಅಲ್ಲ 12 ಗಂಟೆಯೊಳಗೆ 100 ಲಕ್ಷ ಅಂದ್ರೆ 1 ಕೋಟಿಗೂ ಅಧಿಕ ಚಂದಾದಾರರನ್ನು ಸಂಪಾದಿಸಿಕೊಂಡು ಮುನ್ನುಗ್ಗುತ್ತಿದೆ.

ಕ್ರಿಸ್ಟಿಯಾನೋ ರೊನಾಲ್ಡೊ ಅತಿ ಕಡಿಮೆ ಅವಧಿಯಲ್ಲಿ 1 ಕೋಟಿ ಚಂದಾದಾರರನ್ನು ಹೊಂದಿರೋ ಯೂಟ್ಯೂಬರ್ ಅನ್ನೋ ದಾಖಲೆ ಬರೆದಿದ್ದಾರೆ. ಕೇವಲ ಒಂದೇ ದಿನದಲ್ಲಿ ಯೂಟ್ಯೂಬ್ ಚಾನೆಲ್‌ಗೆ ಇಷ್ಟೊಂದು ಚಂದಾದಾರರಾಗಿರೋದು ರೆಕಾರ್ಡ್ ಬ್ರೇಕ್ ಮಾಡಿದೆ.
ಆಗಸ್ಟ್ 21ರಂದು ರೊನಾಲ್ಡೊ ಅವರು ನಾನು ಯೂಟ್ಯೂಬ್ ಚಾನೆಲ್ ಆರಂಭಿಸುವುದಾಗಿ ಘೋಷಣೆ ಮಾಡಿದ್ದರು. ಇದಾದ UR ಕ್ರಿಸ್ಟಿಯಾನೋ ಚಾನೆಲ್ 90 ನಿಮಿಷಕ್ಕೆ 1 ಮಿಲಿಯನ್ ಹಾಗೂ 12 ಗಂಟೆಯಲ್ಲೇ 10 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಈ ಮೂಲಕ ಇಡೀ ವಿಶ್ವದಲ್ಲೇ ಅತ್ಯಂತ ವೇಗದಲ್ಲಿ ಒಂದೇ ದಿನಕ್ಕೆ ಯೂಟ್ಯೂಬ್‌ನಿಂದ ಡೈಮಂಡ್ ಬಟನ್ ಪಡೆದ ಯೂಟ್ಯೂಬರ್ ಆಗಿ ಕ್ರಿಸ್ಟಿಯಾನೋ ರೊನಾಲ್ಡೋ ಹೊರ ಹೊಮ್ಮಿದ್ದಾರೆ.