LATEST NEWS
ಸಿಕ್ಸರ್ ಬಾರಿಸಿದ ಬೆನ್ನಲ್ಲೆ ಹಾರ್ಟ್ ಅಟ್ಯಾಕ್ ನಿಂದ ಸಾವನಪ್ಪಿದ ಯುವಕ

ಪಂಜಾಬ್ ಜೂನ್ 30: ಯುವ ಕ್ರಿಕೆಟಿಗನೊಬ್ಬ ಪಂದ್ಯಾಟದ ವೇಳೆ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಪಂಜಾಬ್ ನ ಫಿರೋಜ್ ಪುರದಲ್ಲಿ ನಡೆದಿದೆ. ಘಟನೆ ರ ವಿಡಿಯೋ ಇದೀಗ ವೈರಲ್ ಆಗಿದೆ. ಸ್ಥಳೀಯ ಪಂದ್ಯವೊಂದರಲ್ಲಿ ನಡೆಯುತ್ತಿದ್ದಾಗ ಈ ಘಟನೆ ನಡೆದಿದ್ದು ಹರ್ಜೀತ್ ಸಿಂಗ್ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಪಂದ್ಯದ ವೇಳೆ ಹರ್ಜೀತ್ ಸಿಂಗ್ ಸಿಕ್ಸರ್ ಬಾರಿಸಿದರು. ನಂತರ ಪಿಚ್‌ನ ಮಧ್ಯದಲ್ಲಿ ಒಂದೆರಡು ಹೆಜ್ಜೆ ನಡೆಯಲು ಹೊರಟಾಗ ಹಠಾತ್ ಕುಸಿದು ಬಿದ್ದರು. ನೋವಿನಿಂದ ಅವರು ಮೊದಲು ಮೊಣಕಾಲುಗಳ ಮೇಲೆ ಕುಳಿತರು. ನಂತರ ಪ್ರಜ್ಞೆ ತಪ್ಪಿ ಬಿದ್ದರು. ಕೂಡಲೇ ಸಹಾಯಕ್ಕೆ ಧಾವಿಸಿದ ಸಹ ಆಟಗಾರರು CPR ಮೂಲಕ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ಆದರೆ ಅದಾಗಲೇ ಕೊನೆಯುಸಿರೆಳೆದಿದ್ದರು. ಹೃದಯಾಘಾತವೇ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.

ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಕ್ರೀಡಾಪಟುಗಳು ಆರೋಗ್ಯವಾಗಿರಲು ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯ. ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಯಾವುದೇ ರೀತಿಯ ತೊಂದರೆ ಕಂಡುಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು. ಯುವಕರು ಹೃದಯದ ಆರೋಗ್ಯದ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ.