LATEST NEWS
ಮಂಗಳೂರಿನ ಸ್ಮಶಾನಗಳಲ್ಲಿ ಕೊರೊನಾ ಸೋಂಕಿತೆಯ ಶವ ಸಂಸ್ಕಾರಕ್ಕೆ ಆಕ್ಷೇಪ

ಮಂಗಳೂರಿನ ಸ್ಮಶಾನಗಳಲ್ಲಿ ಕೊರೊನಾ ಸೋಂಕಿತೆಯ ಶವ ಸಂಸ್ಕಾರಕ್ಕೆ ಆಕ್ಷೇಪ
ಮಂಗಳೂರು, ಏಪ್ರಿಲ್ 23 : ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟ ಮಹಿಳೆಯ ಮೃತದೇಹದ ಅಂತ್ಯ ಸಂಸ್ಕಾರ ನಡೆಸುವುದಕ್ಕೆ ಮಂಗಳೂರಿನ ಸ್ಮಶಾನಗಳ ಸಮೀಪದಲ್ಲಿರುವ ಸ್ಥಳೀಯ ನಿವಾಸಿಗಳಿಂದ ಆಕ್ಷೇಪ ವ್ಯಕ್ತವಾಗಿದ್ದು, ಇದು ಜಿಲ್ಲಾಡಳಿತಕ್ಕೆ ತಲೆನೋವು ತರಿಸಿದೆ.
ಈ ಮೊದಲು ಪಚ್ಚನಾಡಿಯಲ್ಲಿರುವ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು ಆದರೆ ಅಲ್ಲಿ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದಲ್ಲದೆ ಶಾಸಕ ಭರತ್ ಶೆಟ್ಟಿ ಭೇಟಿ ನೀಡಿ ಜನರ ಬೆಂಬಲಕ್ಕೆ ನಿಂತಿದ್ದಾರೆ.

ಈ ಹಿನ್ನಲೆ ಮಂಗಳೂರಿನ ನಂದಿಗುಡ್ಡೆ, ಅಥವಾ ಬೋಳೂರು ಸ್ಮಶಾನಗಳಲ್ಲಿ ಸಂಸ್ಕಾರಕ್ಕೆ ಜಿಲ್ಲಾಡಳಿತ ಮುಂದಾಗಿತ್ತು, ಆದರೆ ಅಲ್ಲೂ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಈ ನಡುವೆ ಶಾಸಕ ವೇದವ್ಯಾಸ್ ಕಾಮತ್ ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿದ್ದರೂ ಕೂಡ ಜನ ಒಪ್ಪದ ಕಾರಣ ದಕ್ಷಿಣಕನ್ನಡ ಜಿಲ್ಲಾಡಳಿತಕ್ಕೆ ಶವಸಂಸ್ಕಾರ ಪರ್ಯಾಯ ವ್ಯವಸ್ಥೆ ಇಲ್ಲದೇ ಗೊಂದಲಕ್ಕೀಡಾಗಿದೆ. ಸದ್ಯ ಕೊರೊನಾದಿಂದ ಮೃತಪಟ್ಟ ಮಹಿಳೆಯ ಶವ ವೆನ್ಲಾಕ್ ಆಸ್ಪತ್ರೆಯಲ್ಲೇ ಇದೆ.