LATEST NEWS
ಗಾಳಿಪಟದ ದಾರಕ್ಕೆ ಸಿಕ್ಕಿಹಾಕಿಕೊಂಡ ಕೊಕ್ಕರೆ ರಕ್ಷಣೆ

ಗಾಳಿಪಟದ ದಾರಕ್ಕೆ ಸಿಕ್ಕಿಹಾಕಿಕೊಂಡ ಕೊಕ್ಕರೆ ರಕ್ಷಣೆ
ಉತ್ತರಕನ್ನಡ ಅಕ್ಟೋಬರ್ 27: ಗಾಳಿಪಟದ ದಾರಕ್ಕೆ ಕೊಕ್ಕರೆಯೊಂದು ಸಿಕ್ಕಿ ಹಾಕಿಕೊಂಡ ಘಟನೆ ಶಿರ್ಸಿ ಶಂಕರಹೊಂಡ ಬಳಿ ನಡೆದಿದೆ.
ಮಕ್ಕಳು ಬಿಟ್ಟ ಗಾಳಿಪಟದ ದಾರವೊಂದಕ್ಕೆ ಕೊಕ್ಕರೆ ಸಿಕ್ಕಿಹಾಕಿಕೊಂಡಿತ್ತು, ಗಾಳಿಪಟದ ದಾರದಿಂದ ತಪ್ಪಿಸಿಕೊಳ್ಳಲು ಕೊಕ್ಕರೆ ಮಾಡಿದ ಪ್ರಯತ್ನ ಫಲಕೊಡದೆ ಗಾಳಿಪಟದ ಹಗ್ಗಕ್ಕೆ ಸಿಕ್ಕಿ ಹಾಕಿಕೊಂಡ ಒದ್ದಾಡಿದೆ.

ಸಿರ್ಸಿ ಜೀವ ಜಲ ಕಾರ್ಯಪಡೆ ತಂಡದ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ್ ಹಾಗೂ ಅವರ ಜೊತೆಗಾರರೂ ಈ ಕೊಕ್ಕರೆಯ ರಕ್ಷಣೆಗೆ ಮುಂದಾದರು, ಹೇಗಾದರೂ ಮಾಡಿ ಕೊಕ್ಕರೆಯನ್ನು ಬದುಕಿಸಬೇಕು, ಕೆಳಗಡೆ ತರಬೇಕು ಎಂದು ಈ ತಂಡ ಚೀಲ ಹೊಲಿಯೋ ಪ್ಲಾಸ್ಟಿಕ್ ರೋಲನ್ನು ಲಾರಿ ಚಕ್ರದ ಬೋಲ್ಟ್‌ಗೆ ಕಟ್ಟಿ ಬಹಳಷ್ಟು ಬಾರಿ ಟ್ರೈ ಮಾಡಿ ಕೊನೆಗೂ ತಮ್ಮ ಕಾರ್ಯಾಚರಣೆಯಲ್ಲಿ ಯಶಸ್ವಿಯಾಯಿತು.
ಇವ್ರ ಈ ತಂಡದಲ್ಲಿ ಒಬ್ಬ ವೈದ್ಯರು ಕೂಡಾ ಇದ್ದು, ಪ್ರಾಣಿ ಪಕ್ಷಿಗಳಿಗೆ ಈ ರೀತಿಯ ಸಮಸ್ಯೆ ಆದರೆ ಅವುಗಳ ಆರೈಕೆ ಮಾಡಿ ಮತ್ತೆ ಅವುಗಳ ಸ್ಥಳಕ್ಕೆ ಬಿಟ್ಟುಬಿಡುತ್ತಾರೆ. ಹೀಗೆ ಸಾಕಷ್ಟು ಪ್ರಾಣಿ ಪಕ್ಷಿಗಳ ರಕ್ಷಣೆ ಈ ತಂಡ ಮಾಡಿದೆ.