Connect with us

    LATEST NEWS

    ಸುರತ್ಕಲ್ ಟೋಲ್ ಸಂಗ್ರಹ ನಿಲ್ಲದಿದ್ದರೆ ಅಕ್ಟೋಬರ್ 30ರ ನಂತರ ನೇರ ಕಾರ್ಯಾಚರಣೆ ಎಚ್ಚರಿಕೆ

    ಸುರತ್ಕಲ್ ಟೋಲ್ ಸಂಗ್ರಹ ನಿಲ್ಲದಿದ್ದರೆ ಅಕ್ಟೋಬರ್ 30ರ ನಂತರ ನೇರ ಕಾರ್ಯಾಚರಣೆ ಎಚ್ಚರಿಕೆ

    ಮಂಗಳೂರು ಅಕ್ಟೋಬರ್ 27: ಜನತೆ ಹಗಲು ರಾತ್ರಿ ಧರಣಿ ನಡೆಸುತ್ತಿದ್ದರೂ, ಕನಿಷ್ಟ ಸ್ಥಳಕ್ಕೆ ತೆರಳಿ ಅಹವಾಲು ಆಲಿಸುವ ಸೌಜನ್ಯ ತೋರದವರು ಜನಪ್ರತಿನಿಧಿಯಾಗಲು ಯೋಗ್ಯರಲ್ಲ ಎಂದು ಮಾಜಿ ಶಾಸಕ ಜೆ.ಆರ್ ಲೋಬೋ ಆರೋಪಿಸಿದ್ದಾರೆ.

    ಸುರತ್ಕಲ್ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಆರಂಭವಾದದ್ದು ಬಿಜೆಪಿ ಆಡಳಿತದ ಅವಧಿಯಲ್ಲಿ. ಮುಚ್ಚಲು ನಿರ್ಧರಿಸಲು ನಿರ್ಧರಿಸಲಾಗಿರುವ ಟೋಲ್ ಗೇಟ್ ಮುಂದುವರಿಯಲು ಸಂಸದ ನಳಿನ್ ಕುಮಾರ್ ಕಟೀಲರೇ ನೇರ ಹೊಣೆ ಎಂದು ಆರೋಪಿಸಿದರು.

    ಸಂಸದ ನಳಿನ್ ತನ್ನ ವೈಫಲ್ಯವನ್ನು ಮುಚ್ಚಿಡಲು ಟೋಲ್ ಗೇಟ್ ಆರಂಭವಾಗಿರುವುದು ಯು ಪಿ ಎ ಕಾಲದಲ್ಲಿ ಎಂದು ಸುಳ್ಳು ಹೇಳುತ್ತಿದ್ದಾರೆ. ಅಕ್ರಮ‌ ಟೋಲ್ ಗೇಟ್ ಮುಚ್ಚಿಸಲಾಗದಿದ್ದರೆ ಸಂಸದ ಸ್ಥಾನಕ್ಕೆ ನಳಿನ್ ರಾಜಿನಾಮೆ ನೀಡಲಿ ಎಂದು ಮಾಜಿ ಶಾಸಕ‌ ಜೆ ಆರ್ ಲೋಬೊ ಆಗ್ರಹಿಸಿದರು.

    ಯುವ ಕಾಂಗ್ರೆಸ್ ದ ಕ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡುತ್ತಾ, ಸಂಸದರು ಜನರನ್ನು ಮೂರ್ಖರೆಂದು ತಿಳಿದಿದ್ದಾರೆ. ಸುರತ್ಕಲ್ ಟೋಲ್ ಗೇಟ್ ಗುತ್ತಿಗೆ ನವೀಕರಿಸಲು ನಳಿನ್ ಕುಮಾರ್ ಕಟೀಲರು ನಡೆಸಿದ ಆಟಗಳನ್ನು ಕಂಡಿರುವ ಜನತೆ ಈ ಬಾರಿ ಸರಿಯಾದ ಪಾಠ ಕಲಿಸಲಿದ್ದಾರೆ.‌ ಅಕ್ಟೋಬರ್ 30 ಕ್ಕೆ ಟೋಲ್ ಸಂಗ್ರಹ ನಿಲ್ಲದಿದ್ದಲ್ಲಿ ಪ್ರತಿಭಟನೆ ನೇರ ಕಾರ್ಯಾಚರಣೆಯಾಗಿ ಬದಲಾಗಲಿದೆ ಎಂದು ಎಚ್ಚರಿಸಿದರು.

    ದ ಕ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಮಾತನಾಡುತ್ತಾ, ಕಳಪೆ ರಸ್ತೆ, ಅರ್ಧಕ್ಕೆ ನಿಂತ ಮೇಲ್ಸೇತುವೆಗಳು, ಬೀದಿಗೊಂದರಂತೆ ತಲೆ ಎತ್ತಿರುವ ನಿಯಮ ಬಾಹಿರ ಟೋಲ್ ಗೇಟ್ ಗಳು ಸಾರಿಗೆ ಉದ್ಯಮದ ಉಸಿರುಗಟ್ಟಿಸುತ್ತಿದೆ. ಈ ಬಾರಿಯ ಟೋಲ್ ಗೇಟ್ ವಿರೋಧಿ ಹೋರಾಟಕ್ಕೆ ಬಸ್ ಮಾಲಕರ ಪೂರ್ಣ ಬೆಂಬಲ ಇದೆ ಎಂದರು. ಅನಿರ್ಧಿಷ್ಟಾವಧಿ ಧರಣಿಗೆ ಆರನೇ ದಿನವಾದ ಇಂದು ಮತ್ತಷ್ಟು ಸಂಘಟನೆಗಳು, ಜನಸಾಮಾನ್ಯರಿಂದ ಬೆಂಬಲ ವ್ಯಕ್ತವಾಯಿತು.

    Share Information
    Advertisement
    Click to comment

    You must be logged in to post a comment Login

    Leave a Reply