Connect with us

    DAKSHINA KANNADA

    ಮೋದಿ ಅಮೇರಿಕಾಕ್ಕೆ ಶರಣಾಗುವುದು ದೇಶ ವಿರೋಧಿ : ಸಿಪಿಐಎಂ

    ಮಂಗಳೂರು, ಸೆಪ್ಟೆಂಬರ್ 01: ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ದೇಶದ ಸ್ವಾತಂತ್ರ್ಯ ಹೋರಾಟದ ಆಶಯಕ್ಕೆ ವಿರೋಧವಾಗಿ ಅಮೇರಿಕಾದೊಂದಿಗೆ ಶರಣಾಗತವಾಗಿರುವುದು ದೇಶ ವಿರೋಧಿ ಕೃತ್ಯ ಎಂದು ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿಯವರು ಹೇಳಿದರು. ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಮುಂದುಗಡೆ ನಡೆದ ಸಾಮ್ರಾಜ್ಯಶಾಹಿ ವಿರೋಧಿ ಹಾಗೂ ವಿಶ್ವಶಾಂತಿ ದಿನಾಚರಣೆಯ ಅಂಗವಾಗಿ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

    ಅಮೇರಿಕಾ ದೇಶದ ಅಧ್ಯಕ್ಷರೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಫೋನಿನಲ್ಲಿ ಮಾತುಕತೆ ನಡೆಸಿ ಅಮೆರಿಕಾದೊಂದಿಗೆ 2 ಬೈ2 ಮಾತುಕತೆ ವಿದೇಶಾಂಗ ವ್ಯವಹಾರ ಹಾಗೂ ರಕ್ಷಣಾ ವ್ಯವಹಾರ ಸಂಬಂಧಿಸಿದ ಸಚಿವಾಲಯ ನಡೆಸುವ ಪ್ರಸ್ತಾವಣೆ ದೇಶಕ್ಕೆ ಅಪಾಯವಾಗಿದೆ. ಅಮೆರಿಕಾದ ಯುದ್ಧ ನೌಕೆ ಮತ್ತು ಯುದ್ಧ ವಿಮಾನಗಳಿಗೆ ಇಂಧನ ಪೂರೈಕೆ ಮತ್ತು ಮರುಪೂರೈಕೆಗೆ ಸ್ಥಳಾವಕಾಶ, ನೆಲೆಯನ್ನು ನೀಡುವುದು ನಮ್ಮ ದೇಶದ ಧೋರಣೆಗೆ ವಿರೋಧವಾಗಿದೆ.

    ಮಾತ್ರವಲ್ಲದೆ ಅಮೆರಿಕಾದ ಬಹುರಾಷ್ಟ್ರೀಯ ಸಂಸ್ಥೆಗಳು ಭಾರತದಲ್ಲಿ ಅಮೆರಿಕಾದ ಯುದ್ಧ ಸಾಮಾಗ್ರಿಗಳನ್ನು ತಯಾರಿಸುವುದು ಮತ್ತು ಅಮೆರಿಕಾದೊಂದಿಗೆ ಜಂಟಿ ಸಮಾರಾಭ್ಯಾಸ ನಮ್ಮ ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿ ಎಂದು ಅವರು ಹೇಳಿದರು.
    ನೆರೆ ರಾಷ್ಟ್ರ ಪಾಕಿಸ್ಥಾನಕ್ಕೆ ಕಳೆದ 15 ವರ್ಷಗಳಿಂದ ಬಿಲಿಯನ್ ಡಾಲರ್‍ಗಳ ಸಹಕಾರ ನೀಡುತ್ತಿರುವ ಅಮೆರಿಕಾ ಈಗ ಭಾರತದೊಂದಿಗೆ ಬಿಲಿಯನ್ ಡಾಲರ್ ಸಹಕಾರ ಮೋಸದಾಟವಲ್ಲದೆ ಮತ್ತೇನಲ್ಲ. ಅಪಘಾನಿಸ್ಥಾನದೊಂದಿಗೆ ಅಮೆರಿಕಾ ಶಸ್ತ್ರ ದಾಳಿ ಇತ್ಯಾದಿ ನಡೆಸಬೇಕಾದರೆ ಪಾಕಿಸ್ಥಾನ ಅಥವಾ ಭಾರತದ ನೆಲೆದ ಅಗತ್ಯ ಬೇಕಾಗಿದೆ.

    ಅಮೆರಿಕಾದ ಈ ಕುತಂತ್ರ ಭಾರತದ ದೇಶದ ಪ್ರಧಾನಿ ನರೇಂದ್ರ ಮೋದಿ ಕುರುಡು ಪ್ರಭಾವ, ಪ್ರಚಾರ ಪ್ರಿಯತೆ ಭಾರತ ದೇಶಕ್ಕೆ ಆಪತ್ತು ಎಂದು ಹೇಳಿದರು. ಚೈನಾ ದೇಶದೊಂದಿಗೆ ಅನಗತ್ಯ ಕಾಲುಕೆರೆದು ಯುದ್ಧೋನ್ಮಾದ ಸೃಷ್ಟಿಸಿ ನಮಗೆ ಅಗತ್ಯವಿಲ್ಲದ ವ್ಯವಹಾರಕ್ಕೆ ಕೈ ಹಾಕಿ ಕೈಸುಟ್ಟುಕೊಂಡಂತಾಗಿದೆ. ಮಾತ್ರವಲ್ಲದೆ ಚೈನಾ ಭಾರತದ ಸೌಹಾರ್ಧ ಸಂಬಂಧಕ್ಕೆ ಧಕ್ಕೆ ಮಾಡಿದೆ ಎಂದು ಅವರು ಖೇಧ ವ್ಯಕ್ತಪಡಿಸಿದರು.

    ಅಮೆರಿಕಾ ದೇಶದ ಎರಡನೇ ಮಹಾಯುದ್ಧದ ನಂತರದ ಅವಧಿಯಿಂದ ಪ್ರಾರಂಭಿಸಿ ಇಂದಿನವರೆಗೂ ಭಯೋತ್ಪಾದಕ ಕೃತ್ಯವನ್ನು ಇರಾಕ್, ಅಪಘಾನಿಸ್ತಾನ, ಇರಾನ್, ಸಿರಿಯಾ, ವಿಯೆಟ್ನಾಂ, ಲಿಬಿಯಾ, ಚಿಲಿ, ಪ್ಯಾಲೆಸ್ತೀನ್, ಕ್ಯೂಬಾ ಮುಂತಾದ ದೇಶಗಳಲ್ಲಿ ಅಮಾಯಕರನ್ನು ತನ್ನ ರಕ್ತಪಿಪಾಸು ನೀತಿಗಳಿಗಾಗಿ ಕೊಲೆ ಮಾಡಿದೆ, ಹಿಂಸೆ ಮಾಡಿದೆ, ಚುನಾಯಿತರ ಸರಕಾರಗಳನ್ನು ಹಿಮ್ಮೆಟ್ಟಿಸಿದೆ. ಸಾರ್ವಭೌಮ ವ್ಯವಸ್ಥೆಯ ಮೇಲೆ ಹಸ್ತಕ್ಷೇಪ ಮಾಡಿದೆ ಎಂದ ಅವರು ಅಮೆರಿಕಾ ಬಾಲಂಗೋಜಿಯಾಗುವುದು ಭಾರತ ದೇಶಕ್ಕೆ ಆಪತ್ತು ಎಂದು ಮೋದಿ ಸರಕಾರದ ನೀತಿಯನ್ನು ಖಂಡಿಸಿದರು.
    ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾದ ಜೆ. ಬಾಲಕೃಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್‍, ಪಕ್ಷ ಜಿಲ್ಲಾ ಮುಂದಾಳುಗಳಾದ ಕೆ. ಯಾದವ ಶೆಟ್ಟಿ, ಕೃಷ್ಣಪ್ಪ ಸಾಲಿಯಾನ್, ಜಯಂತಿ ಬಿ. ಶೆಟ್ಟಿ, ಸದಾಶಿವದಾಸ್, ಯು. ಜಯಂತ ನಾಯ್ಕ್, ರಾಮಣ್ಣ ವಿಟ್ಲ, ಕೃಷ್ಣಪ್ಪ ಕೊಂಚಾಡಿ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *