Connect with us

    LATEST NEWS

    ಕಾಲುಬಾಯಿ ಜ್ವರ – ಕೇರಳದಿಂದ ದಕ್ಷಿಣಕನ್ನಡಕ್ಕೆ ಜಾನುವಾರು ಸಾಗಾಟ ನಿಷೇಧ

    ಮಂಗಳೂರು ಅಗಸ್ಟ್ 08: ಕೇರಳದಲ್ಲಿ ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ ಹೆಚ್ಚಾದ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಗೆ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಕೇರಳದಿಂದ ದಕ್ಷಿಣಕನ್ನಡ ಜಿಲ್ಲೆಗೆ ಜಾನುವಾರ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ.  ಆದೇಶ ಹೊರಡಿಸಿದ್ದಾರೆ.


    ಕೇರಳ ರಾಜ್ಯದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ರೋಗೋದ್ರೇಕವು ಕಂಡುಬಂದಿದ್ದು ಅದು ವೈರಸ್‍ನಿಂದ ಬಹುಬೇಗ ಆರೋಗ್ಯವಂತ ಜಾನುವಾರುಗಳಿಗೆ ಹರಡುತ್ತದೆ. ಈ ರೋಗ ಜಾನುವಾರುಗಳಿಗೆ ಮರಣಾಂತಿಕವಾಗಿರುವುದರಿಂದ ಕೇರಳ ರಾಜ್ಯಕ್ಕೆ ಜಾನುವಾರು ಸಾಗಾಟ ಮಾಡುವುದನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply