LATEST NEWS
ದೇವಸ್ಥಾನದ ಗೂಳಿಯನ್ನು ಬೀಡದ ಗೋಕಳ್ಳರು

ದೇವಸ್ಥಾನದ ಗೂಳಿಯನ್ನು ಬೀಡದ ಗೋಕಳ್ಳರು
ಉಡುಪಿ ಅಕ್ಟೋಬರ್ 2: ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಗೂಳಿಯನ್ನು ಅಪಹರಿಸಲು ಯತ್ನಿಸಿದ್ದ ಗೊಕಳ್ಳರು ಅಲ್ಲೆ ಪಕ್ಕದ ಹಟ್ಟಿಯಲ್ಲಿರುವ ದನಗಳ ಕೂಗಿಗೆ ಗೂಳಿಯನ್ನು ಬಿಟ್ಟು ಓಡಿ ಹೋದ ಘಟನೆ ನಡೆದಿದೆ.
ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಮರ್ಪಿತವಾಗಿರುವ ಗೂಳಿ ಮೇಲೆ ಕಣ್ಣು ಹಾಕಿದ್ದ ಗೋಕಳ್ಳರು ಹೊತ್ತು ಮುಳುಗಿ ಕತ್ತಲಾವರಿಸುತ್ತಿದ್ದಂತೆ ತನ್ನ ಹೊಟ್ಟೆಯನ್ನು ತುಂಬಿಸಿಕೊಂಡು ಬಳ್ಕೂರು ನಿವಾಸಿಯೊಬ್ಬರ ಮನೆಯ ಹಟ್ಟಿಯೊಂದರ ಬಳಿ ಮಲಗಿದ್ದ ಗೂಳಿಯನ್ನು ಅಪಹರಿಸಲು ಹೊಂಚು ಹಾಕಿದ್ದರು,

ರಾತ್ರಿ 9 ಗಂಟೆಯ ಸುಮಾರಿಗೆ ಮಲಗಿರುವ ಆ ಗೂಳಿಗೆ ಅರವಳಿಕೆಯನ್ನು ನೀಡಿ ಗೂಳಿಯ ಪ್ರಜ್ಞೆಯನ್ನು ತಪ್ಪಿಸಲಾಯಿತು, ನಾಲ್ಕುಕಾಲುಗಳನ್ನು ಹಾಗೂ ಬಾಯಿಗಳನ್ನು ಕೂಗದಂತೆ ಬಿಗಿಯಾಗಿ ಕಟ್ಟಿ,ಕುತ್ತಿಗೆಯನ್ನು ಮುರಿಯುವ ಹಾಗೆ ಹಗ್ಗದಿಂದ ಬಿಗಿದು, ತಮ್ಮ ವಾಹನದಲ್ಲಿ ಸಾಗಿಸಲು ಸಿದ್ದತೆ ಮಾಡುತ್ತಿರುವ ಆ ಸಮಯದಲ್ಲಿ ಅಲ್ಲೆ ಪಕ್ಕದ ಹಟ್ಟಿಯಲ್ಲಿರುವ ದನಗಳು ಕೂಗಲಾರಂಭಿಸಿದವು,
ದನಗಳ ಕೂಗನ್ನು ಕೇಳಿಸಿಕೊಂಡು ಮನೆಯವರು ಹೊರಗೆ ಬಂದು ನೋಡುವಾಗ ಆ ದುಷ್ಟ ಕಟುಕರು ಆ ಸ್ಥಳದಿಂದ ಆ ಗೂಳಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.
ಸ್ಥಳೀಯರ ನೆರವಿನಿಂದ ಆ ಗೂಳಿಯನ್ನು ಕಟುಕರಿಂದ ರಕ್ಷಿಸಿಸಲಾಗಿದ್ದು, ಬೆಳಿಗ್ಗೆ ಗೋ ಪ್ರೇಮಿಗಳ ಸಹಯೋಗದೊಂದಿಗೆ “ಹೂವಿನ ಕೆರೆ” ಗೋ ಶಾಲೆಗೆ ಸಾಗಿಸಲಾಯಿತು.