BANTWAL
ತಲವಾರು ದೊಣ್ಣೆ ತೋರಿಸಿ ಜಾನುವಾರು ಕಳವು ನಡೆಸಿದ ಮೂವರ ಅರೆಸ್ಟ್….!!
ಉಳ್ಳಾಲ, ಸೆಪ್ಟೆಂಬರ್ 22: ತಲವಾರು ದೊಣ್ಣೆ ತೋರಿಸಿ ಜೀವ ಬೆದರಿಕೆಯೊಡ್ಡಿ ಜಾನುವಾರು ಕಳವುಗೈದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬಂಧಿತರನ್ನು ಕಸಬಾ ಗ್ರಾಮದ ಜಾಬೀರ್, ಫರಂಗಿಪೇಟೆಯ ಹೈದರಾಲಿ, ಬಂಟ್ವಾಳ ಮುಹಮ್ಮದ್ ಆರೀಫ್ ಬಂಧಿತರು.
ಆರೋಪಿಗಳು ಮಾಡೂರು ಸೈಟ್ ನಿವಾಸಿ ಸತೀಶ್ ಎಂಬವರಿಗೆ ಸೇರಿದ ಹೋರಿಯನ್ನು ಮಾಡೂರು ವನದುರ್ಗ ಅಯ್ಯಪ್ಪ ಮಂದಿರದ ಅಶ್ವತ್ಥಕಟ್ಟೆಯ ಬಳಿಯಿಂದ ಕದಿಯಲು ಬಂದಿದ್ದರು. ಈ ಸಂದರ್ಭ ಮಾಲೀಕ ಸತೀಶ್ ಅವರು ಓಡಿಬಂದಿದ್ದರು. ಈ ವೇಳೆ ತಲವಾರು ಮತ್ತು ದೊಣ್ಣೆ ತೋರಿಸಿದ ದುಷ್ಕರ್ಮಿಗಳು , ಅಡ್ಡಿಪಡಿಸಿದರೆ ಕೊಲ್ಲುವುದಾಗಿ ಜೀವಬೆದರಿಕೆಯೊಡ್ಡಿ ಜಾನುವಾರನ್ನು ಕಾರಿನೊಳಗಡೆ ತುಂಬಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ತನಿಖೆ ನಡೆಸಿದ ಎಸಿಪಿ ನೇತೃತ್ವದ ಉಳ್ಳಾಲ ಪೊಲೀಸ್ ತಂಡ ಮೂವರನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯ ಬಂಧನ ಇನ್ನಷ್ಟೇ ಆಗಬೇಕಿದ್ದು, ಆತ ಪರಾರಿಯಾಗಿದ್ದಾನೆ.