Connect with us

LATEST NEWS

ಹಸುವಿಗೆ ರೇಬಿಸ್ ಶಂಕೆ – ಸಾರ್ವಜನಿಕ ಪ್ರದೇಶದಲ್ಲಿ ದಾಂಧಲೆ ನಡೆಸಿದ ಹಸುವಿಗೆ ದಯಾಮರಣ

ಉಳ್ಳಾಲ ಸೆಪ್ಟೆಂಬರ್ 11: ರೇಬಿಸ್ ಸೊಂಕು ತಗುಲಿದ ದನವೊಂದು ಸಾರ್ವಜನಿಕ ಪ್ರದೇಶದಲ್ಲಿ ದಾಂಧಲೆ ನಡೆಸಿದ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೊಲ್ಯ ಪ್ರದೇಶದಲ್ಲಿ ನಡೆದಿದೆ.


ಸೋಮೇಶ್ವರ ಪರಿಸರದ ಒಬ್ಬರ ದನವೊಂದು ಮೇಯಲು ಬಿಟ್ಟ ಸಂದರ್ಭ ಇದ್ದಕ್ಕಿದ್ದ ಹಾಗೆ  ಉದ್ರಿಕ್ತಗೊಂಡಿದೆ . ಬಳಿಕ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿದೆ, ಅಲ್ಲದೆ ಕೊಲ್ಯದ ಅಡ್ಕ ಸಮೀಪ ಮನೆಯೊಂದರ ಆವರಣದೊಳಕ್ಕೆ ನುಗ್ಗಿ ದಾಂಧಲೆ ನಡೆಸಿತ್ತು. ಈ ವೇಳೆ ಸ್ಥಳೀಯರು ದನವನ್ನು ಹರಸಾಹಸ ಪಟ್ಟು ಹಗ್ಗದಿಂದ ಕಟ್ಟಿಹಾಕಿದ್ದಾರೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪಶುವೈದ್ಯರು ಹಸುವಿನ ವರ್ತನೆಯನ್ನು ಗಮನಿಸಿ ಅದಕ್ಕೆ ರೇಬಿಸ್ ಇರುವ ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೆ ದನ ಸಾರ್ವಜನಿಕ ಪ್ರದೇಶದಲ್ಲಿ ತಿರುಗಾಡಿ ವಿಚಿತ್ರ ವರ್ತನೆ  ಅದರ ಲಕ್ಷಣಗಳನ್ನು ಗಮನಿಸಿದಾಗ ಅದಕ್ಕೆ ರೇಬಿಸ್ ಇರುವುದು ದೃಢಪಟ್ಟಿದೆ. ಈ ಹಿನ್ನಲೆ  ಅದಕ್ಕೆ ದಯಾಮರಣ ನೀಡಿದ್ದಾರೆ.

ಹಸುವಿಗೆ ರೇಬಿಸ್ ಇರುವ ಶಂಕೆ ಇದೆ. ಇದನ್ನು ದೃಢೀಕರಿಸಲು ಹಸುವಿನ ಮಿದುಳನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕಾಗುತ್ತದೆ. ರೇಬಿಸ್‌ ಪೀಡಿತ ಹಸುವಿನಿಂದ ಮನುಷ್ಯರಿಗೆ ರೇಬಿಸ್ ಹರಡುವ ಸಾಧ್ಯತೆ ಕಡಿಮೆ. ಆದರೆ ರೋಗಗ್ರಸ್ತ ಹಸುವಿನ ಜೊಲ್ಲು ತೆರೆದ ಗಾಯಕ್ಕೆ ತಗುಲಿದರೆ ಮಾತ್ರ, ಅದರಿಂದ ಮನುಷ್ಯರಿಗೂ ರೇಬಿಸ್ ಹರಡಲು ಸಾಧ್ಯವಿದೆ. ಹಾಗಾಗಿ ಅದರ ಜೊಲ್ಲು ತಾಗದಂತೆ ಎಚ್ಚರವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ. ‘ಹುಚ್ಚು ನಾಯಿಯ ಕಡಿತದಿಂದ ಹಸುವಿಗೆ ರೇಬಿಸ್ ತಗುಲಿರಬಹುದು. ರೇಬಿಸ್ ತಗುಲಿದ ಹಸುವು ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ’ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *