BANTWAL
ಅಕ್ರಮ ಕಸಾಯಿಖಾನೆ ಮೇಲೆ ದಾಳಿ ಇಬ್ಬರ ಬಂಧನ

ಅಕ್ರಮ ಕಸಾಯಿಖಾನೆ ಮೇಲೆ ದಾಳಿ ಇಬ್ಬರ ಬಂಧನ
ಬಂಟ್ವಾಳ ಮೇ.14: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಒಂದು ರಿಕ್ಷಾ ಹಾಗೂ ನಾಲ್ಕು ಹೋರಿಗಳ ಸಹಿತ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಡೇಶ್ವಾಲ್ಯ ನಿವಾಸಿಗಳಾದ ರಝಾಕ್ ಮತ್ತು ಅಬೂಬಕ್ಕರ್ ಬಂಧಿತ ಆರೋಪಿಗಳು.ಆರೋಪಿಗಳಿಂದ ಒಂದು ರಿಕ್ಷಾ ನಾಲ್ಕು ಹೋರಿ ಹಾಗೂ 40 ಕೆ.ಜಿ.ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕಡೇಶ್ವಾಲ್ಯ ಗ್ರಾಮದ ನಕ್ಕಿಬೆಟ್ಟು ಎಂಬಲ್ಲಿ ರಝಾಕ್ ಎಂಬವರ ಮನೆಯಲ್ಲಿರು ಅಕ್ರಮ ಕೊಠಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ದನಗಳ ವದೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬಂಟ್ವಾಳ ಪೋಲೀಸರು ದಾಳಿ ನಡೆಸಿ ಸ್ಥಳದಲ್ಲಿದ್ದ ಸೊತ್ತುಗಳ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ .

ಆರೋಪಿಗಳು ದನಗಳನ್ನು ವದೆ ಮಾಡಿ ರಿಕ್ಷಾ ದಲ್ಲಿ ಮಾರಾಟ ಮಾಡಲು ಹೊರಟಿದ್ದರು.ಜೊತೆಗೆ ವದೆ ಮಾಡಲು ನಾಲ್ಕು ಹೋರಿಗಳನ್ನು ತೋಟದಲ್ಲಿ ಕಟ್ಟಿಹಾಕಿದ್ದರು. ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಸಿಬ್ಬಂದಿ ಗಳಾದ ಜನಾರ್ಧನ, ಸುರೇಶ್, ವರ್ಗೀಸ್, ಬಸವರಾಜ್ ಮತ್ತು ವಿಶಾಲಾಕ್ಷಿ ದಾಳಿಯಲ್ಲಿ ಭಾಗವಹಸಿದ್ದರು.