LATEST NEWS
ಮಂಗಳೂರು – ವಿಷಕಾರಿ ಸೊಪ್ಪು ತಿಂದು ಒಂದು ದನ ಸಾವು..!

ಮಂಗಳೂರು ಮಾರ್ಚ್ 09: ಸೊಪ್ಪನ್ನು ತಿಂದು ಒಂದು ದನ ಸಾವನಪ್ಪಿ ಎರಡು ದನ ಹಾಗೂ ಮೂರು ಕರುಗಳು ಗಂಭೀರ ಸ್ಥಿತಿದೆ ತಲುಪಿದ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಸೋಮೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡೋಳಿ ಎಂಬಲ್ಲಿ ಸಂಭವಿಸಿದೆ.
ಕೃಷಿಕ ಸಂಜೀವ ಪೂಜಾರಿ ಎಂಬವರಿಗೆ ಸೇರಿದ ಮನೆಯಲ್ಲಿ ಘಟನೆ ಸಂಭವಿಸಿದೆ. ಮಾರ್ಚ್ 8 ರ ಮಧ್ಯಾಹ್ನ ಮನೆಯವರು ಕರಿ ಬಸ್ರಿ ತಳಿಯ ಸೊಪ್ಪು ಜಾನುವಾರುಗಳು ಮಲಗುವ ಬೆಡ್ಡಿಂಗ್ ಗೆಂದು ಹಾಕಲಾಗಿದೆ. ಆದರೆ ಹಸುಗಳೆಲ್ಲಾ ಅದನ್ನೇ ತಿಂದ ನಂತರ ಅಸ್ವಸ್ಥತೆಗೆ ಒಳಗಾಗಿದೆ. ಸಂಜೆ ನಂತರ ಹಸುಗಳು ಕೆಲವು ಮಲಗಿದ್ದಲ್ಲೇ ಬಿದ್ದರೆ, ಇನ್ನುಳಿದ ಕಾಲುಗಳನ್ನು ನೆಲಕ್ಕೆ ಹೊಡೆಯುವ ರೀತಿಯಲ್ಲಿ ವರ್ತಿಸುತಿತ್ತು. ಕೂಡಲೇ ಪಶುವೈದ್ಯಾಧಿಕಾರಿಗಳು ಆಗಮಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಆದರೆ ಇಂದು ಮುಂಜಾನೆ ವೇಳೆಗೆ ತಿಂದ ಎಲೆಗಳ ವಿಷಾಹಾರ ಹಸುವಿನ ಇಡಿ ದೇಹಕ್ಕೆ ಪಸರಿ ನಸುಕಿನ ಜಾವ ಒಂದು ಹಸು ಸಾವನ್ನಪ್ಪಿತ್ತು. ಇನ್ನುಳಿದ ಹಸುಗಳು ಗಂಭೀರ ಸ್ಥಿತಿಗೆ ತಲುಪಿದ್ದವು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮನೆಮುಂದೆ ಜಮಾಯಿಸಿದ್ದು, ಪಶುವೈದ್ಯರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಬಳಿಕ ಸ್ಥಳಕ್ಕಾಗಮಿಸಿದ ಕೋಟೆಕಾರು ಪಶು ವೈದ್ಯಾಧಿಕಾರಿ ಡಾ. ಚಂದ್ರಹಾಸ್ ನೇತೃತ್ವದಲ್ಲಿ ಚಿಕಿತ್ಸೆಯನ್ನು ಆರಂಭಿಸಲಾಯಿತು. ತಲಪಾಡಿ ಪಶು ವೈದ್ಯಾಧಿಕಾರಿ ಡಾ. ರಚನಾ ಅವರೂ ಸ್ಥಳಕ್ಕಾಗಮಿಸಿ ಗಂಭೀರ ಸ್ಥಿತಿಯಲ್ಲಿರುವ ಜಾನುವಾರುಗಳಿಗೆ ಚಿಕಿತ್ಸೆ ನಡೆಸುತ್ತಿದ್ದಾರೆ. ಜಾನುವಾರು ಮಲಗುವ ಹಟ್ಟಿಗೆ ಗೋಳಿ ಸೊಪ್ಪು (ಕರಿ ಬಸ್ರಿ) ಬೆಡಿಂಗ್ ಹಾಕಲಾಗಿದೆ. ಜಾನುವಾರುಗಳು ಆಕಸ್ಮಿಕವಾಗಿ ಅದೇ ಸೊಪ್ಪುಗಳನ್ನು ತಿಂದಿವೆ. ಅಧಿಕವಾಗಿ ತಿಂದಿರುವುದರಿಂದ ಪಾಯಿಸನಿಂಗ್ ಆಗಿದೆ. ರಕ್ತದ ಜೊತೆಗೆ ಸೇರಿಕೊಂಡು ಎಲೆಯಲ್ಲಿರುವ ಸೊನೆ ( ಸಿಸರ್ಸ್) ದೇಹದೊಳಕ್ಕೆ ಸ್ಟಿಕನಿಂಗ್ ಉಂಟಾಗಿದೆ. ಇದರಿಂದ ಒಂದು ಜಾನುವಾರು ಗಂಭೀರವಾಗಿ ಸಾವನ್ನಪ್ಪಿ, ಉಳಿದವುಗಳಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.