LATEST NEWS
ಇಟಲಿಯಿಂದ ಬಂದು ಬೆಂಗಳೂರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಂಗಳೂರಿನ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಖಾದರ್

ಇಟಲಿಯಿಂದ ಬಂದು ಬೆಂಗಳೂರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಂಗಳೂರಿನ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಖಾದರ್
ಮಂಗಳೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ತನ್ನ ಮನೆಗೆ ಬರಲಾಗದೇ ಬೆಂಗಳೂರಿನಲ್ಲಿ ಸಿಕ್ಕಿ ಹಾಕಿಕೊಂಡ ಮಂಗಳೂರು ಮೂಲದ ಯುವತಿಯನ್ನು ಮಾಜಿ ಸಚಿವ ಯು.ಟಿ ಖಾದರ್, ತನ್ನ ಕಾರಿನಲ್ಲಿ ಮಂಗಳೂರಿಗೆ ಕರೆತಂದು ಯುವತಿ ಮನೆಗೆ ಸೇಫ್ ಆಗಿ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಇಟಲಿಯಲ್ಲಿ ವಾಸವಾಗಿದ್ದ ಮಂಗಳೂರಿನ ಮೂಲದ ಶ್ರೀಮಧು ಇಟಲಿಯಿಂದ ಮಾರ್ಚ್ 22ರಂದು ಕೊನೆ ವಿಮಾನದಲ್ಲಿ ದೆಹಲಿ ತಲುಪಿದ್ದಳು. ಇಟಲಿಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಆಕೆಯನ್ನು ದೆಹಲಿಯಲ್ಲಿ ಕ್ವಾರಂಟೈನಲ್ಲಿ ಇರಿಸಲಾಗಿತ್ತು.

ಕ್ವಾರಂಟೈನ್ ಅವಧಿ ಮುಗಿದ ಬಳಿಕ ಮೊನ್ನೆ ರಾತ್ರಿ ದೆಹಲಿಯ ವಿಶೇಷ ಬಸ್ ಮೂಲಕ ಶ್ರೀಮಧು ಬೆಂಗಳೂರು ತಲುಪಿದ್ದಳು. ಈ ನಡುವೆ ರಾಜ್ಯದಲ್ಲಿ ಲಾಕ್ ಡೌನ್ ನಿಂದಾಗಿ ಯಾವುದೇ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಶ್ರೀ ಮಧು ಬೆಂಗಳೂರಿನಲ್ಲಿ ದಿಕ್ಕು ತೋಚದಂತಾಗಿದ್ದರು.
ನಂತರ ಮಾಜಿ ಸಚಿವ ಯು.ಟಿ ಖಾದರ್ ಅವರಿಗೆ ಮಾಹಿತಿ ನೀಡಿದ್ದು, ಯುವತಿಯ ಕಷ್ಟಕ್ಕೆ ಧಾವಿಸಿ ತನ್ನ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಕರೆ ತಂದು ಶ್ರೀಮಧು ಅವರ ಕುಳಾಯಿಯಲ್ಲಿ ಇರುವ ಮನೆಗೆ ಬಿಟ್ಟಿದ್ದಾರೆ. ಖಾದರ್ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.