Connect with us

    DAKSHINA KANNADA

    ಜನಧನ ಖಾತೆ ಹಣಕ್ಕಾಗಿ ಮುಗಿಬಿದ್ದ ಮಹಿಳೆಯರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಫಲ

    ಜನಧನ ಖಾತೆ ಹಣಕ್ಕಾಗಿ ಮುಗಿಬಿದ್ದ ಮಹಿಳೆಯರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಫಲ

    ಪುತ್ತೂರು ಎಪ್ರಿಲ್ 13: ಕೊರೊನಾ ಲಾಕ್ ಡೌನ್ ಆದೇಶವನ್ನು ದಕ್ಷಿಣಕನ್ನಡ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಜಾರಿಗೆ ತರಲು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ಕೆಲವು ಕಡೆಗಳಲ್ಲಿ ಮಾತ್ರ ಈ ಆದೇಶವನ್ನು ಜನ ಗಾಳಿಗೆ ತೂರುತ್ತಿರುವ ವಿದ್ಯಮಾನಗಳೂ ಬೆಳಕಿಗೆ ಬರುತ್ತಿವೆ.

    ಪುತ್ತೂರಿನ ವಿವಿಧ ಬ್ಯಾಂಕ್ ಗಳ ಮುಂದೆ ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಮುಗಿಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೇಂದ್ರ ಸರಕಾರ ಜನಧನ್ ಖಾತೆಗೆ ಹಾಕಿದ ಹಣವನ್ನು ಪಡೆಯಲು ಮಹಿಳೆಯರು ಸರತಿ ಸಾಲಿನಲ್ಲಿ ನಿಂತಿದ್ದರೂ ,ಯಾವುದೇ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ.

    ಬ್ಯಾಂಕ್ ಸಿಬ್ಬಂದಿಗಳು ಈ ಬಗ್ಗೆ ಗಮನವನ್ನೇ ಹರಿಸದ ಕಾರಣ ಪುತ್ತೂರು ಪೇಟೆಯ ಹಲವು ಕಡೆಗಳಲ್ಲಿ ಈ ರೀತಿಯ ದೃಶ್ಯಗಳು ಕಂಡು ಬರುತ್ತಿವೆ. ಬ್ಯಾಂಕ್ ನೊಳಗೆ ಮಾತ್ರ ಬ್ಯಾಂಕ್ ಸಿಬ್ಬಂದಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದು, ಜನಸಾಮಾನ್ಯ ಮಾತ್ರ ಯಾವ ರೀತಿ ಬೇಕಾದರೂ ಇರಲಿ ಎನ್ನುವ ನಿರ್ಲಕ್ಷ್ಯವೂ ಇಲ್ಲಿ ಎದ್ದುಕಾಣುತ್ತಿವೆ.


    ಅಲ್ಲದೆ ಜನಧನ ಖಾತೆಯ ಹಣವನ್ನು ಪಡೆಯಲು ಜನಸಂದಣಿಯೇ ಬ್ಯಾಂಕ್ ಮುಂದೆ ಇದ್ದರೂ ಬ್ಯಾಂಕ್ ಸಿಬ್ಬಂದಿಗಳು ಈ ಖಾತೆಯವರ ಹಣ ವಿತರಿಸಲು ಪರ್ಯಾಯ ವ್ಯವಸ್ಥೆಯನ್ನೂ ಮಾಡಿಕೊಂಡಿಲ್ಲ. ಕೇವಲ ಒಂದೇ ಕೌಂಟರ್ ನಲ್ಲಿ ಹಣ ವಿತರಣೆಯ ವ್ಯವಸ್ಥೆ ಮಾಡಿರುವ ಕಾರಣಕ್ಕಾಗಿಯೇ ಜನ ಬೆಳಿಗ್ಗಿನಿಂದ ಲಾಕ್ ಡೌನ್ ಅಂತ್ಯಗೊಳ್ಳುವ ಸಮಯದವರೆಗೆ ಕಾಯಬೇಕಾದ ಸ್ಥಿತಿಯಲ್ಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply