LATEST NEWS
ಇನ್ನು ಕೊರೊನಾ ಸೊಂಕಿತರು ಕೋವಿಡ್ ಕೇರ್ ಗೆ ಶಿಫ್ಟ್ – ಉಡುಪಿ ಕೋವಿಡ್ ಉಸ್ತುವಾರಿ ಸುನಿಲ್ ಕುಮಾರ್
ಉಡುಪಿ ಅಗಸ್ಟ್ 07 : ಉಡುಪಿಲ್ಲೆಯಲ್ಲಿ ಕೋವಿಡ್ ನಿಧಾನವಾಗಿ ಜಾಸ್ತಿಯಾಗುತ್ತಿದ್ದು, ಕೊರೊನಾ ಪಾಸಿಟಿವ್ ಬಂದವರನ್ನು ಕೋವಿಡ್ ಕೇರ್ ಸೆಂಟರ್ ಗೆ ಶಿಫ್ಟ ಮಾಡುವ ನಿರ್ಣಯವನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದು ಉಡುಪಿ ಕೋವಿಡ್ ಉಸ್ತುವಾರಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಸದ್ಯ ಉಡುಪಿಯಲ್ಲಿ 1368 ಸಕ್ರೀಯ ಪ್ರಕರಣ ಇದ್ದು,ಪಾಸಿಟಿವ್ ಬಂದವರನ್ನು ಕೋವಿಡ್ ಕೇರ್ ಸೆಂಟರ್ ಶಿಫ್ಟ್ ನಿರ್ಣಯ ಮಾಡಿದ್ದೇವೆ. ಮನೆಯವರು, ರೋಗಿಗಳು ಜಿಲ್ಲಾಡಳಿತದ ಜೊತೆ ಸಹಕಾರ ಮಾಡಬೇಕು
ಸ್ಥಳೀಯಾಡಳಿತ ಜೊತೆ ಜನರು ಸಹಕಾರ ಮಾಡಬೇಕು, ಕೋವಿಡ್ ನಿಯಂತ್ರಣ ಕ್ಕೆ ಇದು ಸೂಕ್ತ ಎಂದು ಅಧಿಕಾರಿಗಳು, ಪ್ರತಿನಿಧಿಗಳ ತೀರ್ಮಾನಿಸಿದ್ದೇವೆ ಎಂದರು, ಜಿಲ್ಲೆಯಲ್ಲಿ 2000 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಸಿದ್ಧವಿದೆ. ಹೆಬ್ರಿ, ಕಾರ್ಕಳ, ಉಡುಪಿ, ಕುಂದಾಪುರ ಆಕ್ಸಿಜನ್ ಉತ್ಪಾಧಕಾ ಘಟಕದ ಕಾಮಗಾರಿ ಒಂದು ವಾರದೊಳಗೆ ಪೂರ್ಣ ಆಗಲಿದೆ ಎಂದ ಅವರು , ಆಗಸ್ಟ್ 30 ಒಳಗೆ ಜಿಲ್ಲೆಯಲ್ಲಿ ಐಸಿಯು ಸಂಖ್ಯೆನ್ನು ಹೆಚ್ಚಿಸಲಾಗುವುದು ಎಂದರು.
ಉಡುಪಿಯಲ್ಲಿ 34 ಸಾವಿರ ಡೋಸ್ ವ್ಯಾಕ್ಸಿನ್ ಕೊರತೆ ಇದೆ, ರಾಜ್ಯದ ಅಧಿಕಾರಿಗಳ ಜೊತೆ ಮಾತುಕತೆ ಮಾಡಿ ವ್ಯಾಕ್ಸಿನ್ ತರಿಸುತ್ತೇವೆ, ಐದು ಪಾಸಿಟಿವ್ ಕೇಸ್ 100 ಮೀಟರ್ ಒಳಗೆ ಬಂದರೆ ಕಂಟೈನ್ಮೆಂಟ್ ಜೋನ್ ಮನೆ , ಅಪಾರ್ಟ್ಮೆಂಟ್ ಸೀಲ್ ಮಾಡಲು ಸೂಚನೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾ ಕೋವಿಡ್ ಉಸ್ತುವಾರಿ ಸುನಿಲ್ ಕುಮಾರ್ ಹೇಳಿದ್ದಾರೆ.