Connect with us

    DAKSHINA KANNADA

    ಲಂಚ ಸ್ವೀಕಾರ ಪುತ್ತೂರ್ ತಹಶಿಲ್ದಾರ್ ಪ್ರದೀಪ್ ಕುಮಾರ್ ಜಾಮೀನು ಅರ್ಜಿ ವಜಾ

    ಲಂಚ ಸ್ವೀಕಾರ ಪುತ್ತೂರ್ ತಹಶಿಲ್ದಾರ್ ಪ್ರದೀಪ್ ಕುಮಾರ್ ಜಾಮೀನು ಅರ್ಜಿ ವಜಾ

    ಪುತ್ತೂರು ಜೂನ್ 27: ಲಂಚ ಸ್ವೀಕರಿಸುವಾಗಿ ನಡು ರೋಡ್ ನಲ್ಲಿ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದ ಪುತ್ತೂರ್ ತಹಶಿಲ್ದಾರ್ ಪ್ರದೀಪ್ ಕುಮಾರ್ ಅವರ ಜಾಮೀನು ಅರ್ಜಿ ನ್ಯಾಯಾಲಯ ವಜಾಗೊಳಿಸಿದೆ.

    ಪುತ್ತೂರು ತಹಸಿಲ್ದಾರ್ ಆಗಿರುವ ಆರೋಪಿ ಪ್ರದೀಪ್ ಕುಮಾರ್ ಎಂಬಾತನು ಪುತ್ತೂರಿನ ಪೈ ಕೇಟರರ್ಸ್ ನ ದಿನೇಶ್ ಪೈ ಯವರಿಂದ ರೂ 1,25,000/- ಲಂಚ ಸ್ವೀಕರಿಸುತ್ತಿದ್ದಾಗ ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳದ ಎಸ್ಪಿ ಉಮಾ ಪ್ರಶಾಂತ್ ಮತ್ತು ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ತಂಡ ದಾಳಿ ನಡೆಸಿ ಆರೋಪಿಯನ್ನು ಬಂದಿಸಿದ್ದರು.

    ಪರ್ಲಡ್ಕದ ಪೈ ಕೆಟರರ್ಸ್ ಮಾಲಕ ದಿನೇಶ್ ಪೈಯವರಿಂದ ಲಂಚ ಪಡೆದ ಆರೋಪದಡಿ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಂದ ಜೂನ್ 20ರಂದು ಸಂಜೆ ಬಂಧಿಸಲ್ಪಟ್ಟು ಇದೀಗ ಮಂಗಳೂರಿನ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್‌ರವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ ಮೂರನೇ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈಯವರು ವಜಾಗೊಳಿಸಿ ಆದೇಶಿಸಿದ್ದಾರೆ.

    ಲೋಕಸಭಾ ಚುನಾವಣೆ ಪ್ರಯುಕ್ತ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ನಡೆದ ಮಸ್ಟರಿಂಗ್, ಡಿ ಮಸ್ಟರಿಂಗ್ ಮತ್ತು ತರಬೇತಿ ಕಾರ್ಯದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಒಟ್ಟು 19 ದಿನ ಹಗಲು ರಾತ್ರಿ ಊಟ ಹಾಗೂ ಉಪಹಾರ ಪೂರೈಸಿದ್ದ ಪರ್ಲಡ್ಕ ಪೈ ಕೆಟರರ್ಸ್ ಮಾಲಕ ದಿನೇಶ್ ಪೈಯವರಿಗೆ ಸರಕಾರದಿಂದ 9ಲಕ್ಷದ 39 ಸಾವಿರ ರೂ ಮಂಜೂರು ಮಾಡಲು ಒಮ್ಮೆ 99 ಸಾವಿರ ರೂ ಮತ್ತು ಇನ್ನೊಮ್ಮೆ 1 ಲಕ್ಷದ 25 ಸಾವಿರ ರೂ ಲಂಚ ಪಡೆದ ಪ್ರಕರಣದಡಿ ಬಂಧಿತರಾಗಿ ಇದೀಗ ಸೆರೆಮನೆಯಲ್ಲಿರುವ ಡಾ. ಪ್ರದೀಪ್ ಕುಮಾರ್‌ರವರ ಪರ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಭ್ರಷ್ಟಾಚಾರ ನಿಗ್ರಹದಳದ ಪರ ವಕೀಲರಾದ ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್.ಎನ್. ರಾಜೇಶ್ ರವರು ಡಾ. ಪ್ರದೀಪ್ ಕುಮಾರ್‌ರವರಿಗೆ ಜಾಮೀನು ನೀಡುವುದಕ್ಕೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ವಕೀಲರ ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶ ಮುರಳೀಧರ ಪೈಯವರು ಜೂನ್ 27ರಂದು ಆದೇಶ ಪ್ರಕಟಿಸಿದ್ದು ಡಾ. ಪ್ರದೀಪ್‌ರವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *