ರಸ್ತೆ ಬದಿ ನಡೆದು ಹೋಗುತ್ತಿದ್ದ ಅಣ್ಣ ತಮ್ಮಂದಿರ ಮೇಲೆ ಹರಿದ ಕಾರು ಇಬ್ಬರ ಸಾವು

ಕೋಟ ಜೂನ್ 27: ರಸ್ತೆ ಬದಿ ನಡೆದು ಹೋಗುತ್ತಿದ್ದ ಪಾದಾಚಾರಿ ಇಬ್ಬರ ಮೇಲೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಒರ್ವ ಸ್ಥಳದಲ್ಲೇ ಮೃತಪಟ್ಟು ಇನ್ನೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತರನ್ನು ಸಾಲಿಗ್ರಾಮ ಸಮೀಪದ ಕಾರ್ಕಡ ಗ್ರಾಮದ ಚಂದ್ರ ಮತ್ತು ನಾರಾಯಣ ಎಂದು ಗುರುತಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ ಸಾಲಿಗ್ರಾಮ ಸಮೀಪ ಹಾಡಿಮನೆ ಹೋಟೆಲ್ ಸಮೀಪ ಈ ಘಟನೆ ನಡೆದಿದೆ. ಘಟನೆ ಸಿಸಿಟಿವಿ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಂದು ಸಂಜೆ ಸುಮಾರು 4.30 ಗೆ ಈ ಘಟನೆ ನಡೆದಿದೆ. ಅಣ್ಣ ತಮ್ಮ ಇಬ್ಬರು ಕೆಲಸ ಮುಗಿಸಿ ಸಾಲಿಗ್ರಾಮ ಪೇಟೆಗೆ ಬಂದಿದ್ದರು ಎಂದು ಹೇಳಲಾಗಿದ್ದು, ಪೇಟೆಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭ ಮಾರುತಿ ಇಕೋ ಕಾರೊಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರ ಮೇಲೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಒಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪ್ರಕರಣದ ಸಿಸಿಟಿವಿ ಲಭ್ಯವಾಗಿದ್ದು ಅಪಘಾತದ ತೀವೃತೆಯನ್ನು ತಿಳಿಸುತ್ತದೆ.

VIDEO

4 Shares

Facebook Comments

comments