LATEST NEWS
ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭ ಪ್ರಮುಖ ಮೂರು ಪ್ರಕರಣಗಳಲ್ಲಿ ಖುಲಾಸೆ

ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭ ಪ್ರಮುಖ ಮೂರು ಪ್ರಕರಣಗಳಲ್ಲಿ ಖುಲಾಸೆ
ಉಡುಪಿ ಅಕ್ಟೋಬರ್ 30: ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಮುಖ ಮೂರು ಪ್ರಕರಣಗಳಿಂದ ಖುಲಾಸೆಗೊಳಿಸಿ ಉಡುಪಿ ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ.
ನಕ್ಸಲ್ ಚಟುವಟಿಕೆಯಲ್ಲಿ ನೀಲಗುಳಿಯವರು ಸಕ್ರಿಯರಾಗಿದ್ದಾಗ ಈ ಪ್ರಕರಣಗಳು ದಾಖಲಾಗಿದ್ದುವು. 2008 ರಲ್ಲಿ ಮೇಯಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗುಂಡಿಗೆ ಬಲಿಯಾದ ಶಿಕ್ಷಕ ಭೋಜ ಶೆಟ್ಟಿ ಹತ್ಯೆ, ಬೆದರಿಕೆ ಮತ್ತು ನಕ್ಸಲ್ ಕರಪತ್ರ ಹಂಚಿದ ಪ್ರಕರಣಗಳಿಂದ ನೀಲಗುಳಿ ಪದ್ಮನಾಭರಿಗೆ ನ್ಯಾಯಾಲಯ ಖುಲಾಸೆಗೊಳಿಸಿದೆ. ಚಿಕ್ಕಮಗಳೂರು ಜಿಲ್ಲೆಯ ನೀಲಗುಳಿ ನಿವಾಸಿಯಾಗಿರುವ ಪದ್ಮನಾಭ ದಶಕಗಳ ಕಾಲ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರು.

ಪತ್ರಕರ್ತೆ ದಿವಂಗತ ಗೌರಿ ಲಂಕೇಶ್ ನೇತೃತ್ವದಲ್ಲಿ ನೀಲಗುಳಿ ಮುಖ್ಯವಾಹಿನಿಗೆ ಬಂದಿದ್ದರು.ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ಶರಣಾಗತಿಯಾಗಿದ್ದರು.